ಷರೀಫ್ ಆಸ್ತಿ ತನಿಖೆ:ಇಂದು ಕೋರ್ಟಿಗೆ ವರದಿ
ಬೆಂಗಳೂರು, ಮೇ 25– ಮಾಜಿ ರೈಲ್ವೆ ಸಚಿವ ಸಿ.ಕೆ. ಜಾಫರ್ ಷರೀಫ್ ಅವರು ಗೊತ್ತಾದ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿದ್ದಾರೆ ಎಂಬ ಆರೋಪದ ಬಗ್ಗೆ ತನಿಖೆ ನಡೆಸುತ್ತಿರುವ ಕೇಂದ್ರ ತನಿಖಾ ದಳ(ಸಿಬಿಐ) ರಾಜ್ಯ ಹೈಕೋರ್ಟ್‌ನಲ್ಲಿ ನಾಳೆ ತನಿಖೆಯ ಪ್ರಗತಿ ಕುರಿತು ವರದಿ ಸಲ್ಲಿಸಿದೆ.

ಸಿಬಿಐ ತನಿಖೆ ನಡೆಸುತ್ತಿರುವ ರಾಜ್ಯಕ್ಕೆ ಸಂಬಂಧಿಸಿದ ಪ್ರಕರಣಗಳ ಪ್ರಗತಿ ಪರಿಶೀಲನೆಗಾಗಿ ಇಂದು ನಗರಕ್ಕೆ ಆಗಮಿಸಿದ ಸಿಬಿಐ ನಿರ್ದೇಶಕ ಜೋಗಿಂದರ್ ಸಿಂಗ್ ಸುದ್ದಿಗಾರರ ಜತೆ ಮಾತನಾಡುತ್ತಾ ಈ ವಿಷಯ ತಿಳಿಸಿದರು.

ಹೈಕೋರ್ಟ್‌ನಲ್ಲಿ ನಾಗರಿಕರೊಬ್ಬರು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಸಲ್ಲಿಸಲಿರುವ ಹಿನ್ನೆಲೆಯಲ್ಲಿ ನ್ಯಾಯಾಲಯ ಷರೀಫ್ ಅವರ ಆಸ್ತಿ ಕುರಿತು ತನಿಖೆ ನಡೆಸಲು ಸಿಬಿಐಗೆ ನಿರ್ದೇಶಿಸಿದೆ.

ಔರಾದ್‌ನಲ್ಲಿ ಕುಡಿಯುವನೀರು ಮಾರಾಟ!
ಬೀದರ್, ಮೇ 25– ಔರಾದ್ ಪಟ್ಟಣದಲ್ಲಿ ಕಳೆದ 16 ದಿನಗಳಿಂದ ಕುಡಿಯುವ ನೀರಿಗೆ ತೀವ್ರ ಹಾಹಾಕಾರ ಉಂಟಾಗಿದ್ದು, ಕೊಡವೊಂದಕ್ಕೆ ರೂ. 2 ಮತ್ತು ಬ್ಯಾರೆಲ್‌ವೊಂದಕ್ಕೆ ರೂ. 40–50 ವರೆಗೆ ಕುಡಿಯುವ ನೀರು ಮಾರಾಟ ಮಾಡಲಾಗುತ್ತಿದೆ ಎಂದು ಇಲ್ಲಿಗೆ ಬಂದಿರುವ ವರದಿ ತಿಳಿಸಿದೆ.

ಔರಾದ್ ಪಟ್ಟಣಕ್ಕೆ ನೀರು ಪೂರೈಸುವ ಬೋರಾಳ ಹತ್ತಿರವಿರುವ ಕೊಳವೆ ಬಾವಿ ಕೆಟ್ಟಿದ್ದು, ಅದನ್ನು ಈವರೆಗೆರಿಪೇರಿ ಮಾಡಲು ಸಾಧ್ಯವಾಗಿಲ್ಲ.

ಪಟ್ಟಣದಲ್ಲಿರುವ ಬಹುತೇಕ ಬಾವಿಗಳು ಬತ್ತಿ ಹೋಗಿರುವುದರಿಂದ ಜನರು ಕನಿಷ್ಠ 2–3 ಕಿ.ಮೀಗಳಷ್ಟು ದೂರ ಹೋಗಿ ಖಾಸಗಿ ಬಾವಿಗಳಿಂದಕುಡಿಯುವ ನೀರು ತರಬೇಕಾಗಿದೆ. ಇದರಿಂದಾಗಿ ಸೈಕಲ್, ತಳ್ಳುವ ಗಾಡಿ, ಮೋಟರ್ ಸೈಕಲ್ ಮತ್ತು ಮಕ್ಕಳು ಹಾಗೂ ಮಹಿಳೆಯರು ತಲೆ ಮೇಲೆ ಕೊಡಗಳನ್ನು ಹೊತ್ತು ನೀರು ತರುವುದು ಸರ್ವೇ ಸಾಮಾನ್ಯವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.