ಪರಭಾರೆ ಮಾಡಿದ ಜಮೀನು ಮತ್ತೆ ತೋಟಿ ತಳವಾರರಿಗೆ
ಬೆಂಗಳೂರು, ಮೇ 27– ಸರ್ಕಾರದಿಂದ ಪಡೆದ ಜಮೀನನ್ನು ಪರಭಾರೆ ಮಾಡಿರುವ ತೋಟಿ, ತಳವಾರರಿಗೆ ಮತ್ತೆ ಅವರ ಜಮೀನು ಅವರಿಗೆ ದೊರೆಯುವಂತೆ ಪ್ರಯತ್ನ ಮಾಡಬೇಕೆಂದು ಇಂದು ನಡೆದ ರಾಜ್ಯದ ಮಂತ್ರಿಮಂಡಲದ ಸಭೆ ತೀರ್ಮಾನಿಸಿತು.

ಈ ಉದ್ದೇಶ ಸಾಧನೆಗಾಗಿ ಗ್ರಾಮಾಧಿಕಾರಿಗಳಿಗೆ ಸಂಬಂಧಿಸಿದ ಶಾಸನವನ್ನು ತಿದ್ದುಪಡಿ ಮಾಡಬೇಕೆಂದು ತಾತ್ವಿಕವಾಗಿ ನಿರ್ಧರಿಸಿತು.

ಶೀಘ್ರವೇ ಅಮೆರಿಕ ರಷ್ಯಾ ಎರಡನೇ ಸುತ್ತು ಮಾತುಕತೆ
ಹೆಲ್ಸಿಂಕಿ, ಮೇ 27– ಅಮೆರಿಕ ಮತ್ತು ರಷ್ಯಾಗಳು ಶಸ್ತ್ರಾಸ್ತ್ರ ಮಿತಿ ಕುರಿತ ಮಾತುಕತೆಯ ಎರಡನೇ ಹಂತದ ಸಂಧಾನವನ್ನು ಕೆಲವೇ ತಿಂಗಳಲ್ಲಿ ಆರಂಭಿಸಲಿವೆ. ಮುಂದಿನ ಸುತ್ತು ಮಾತುಕತೆ ವಿಯನ್ನಾದಲ್ಲಿ ನಡೆಯುವ ನಿರೀಕ್ಷೆ ಇದೆ.

ಮಾರಕ ಶಸ್ತ್ರಾಸ್ತ್ರ ಮಿತಿ ಕುರಿತ ತಾತ್ಕಾಲಿಕ ಒಪ್ಪಂದವನ್ನು ಸಾಕಷ್ಟು ಪುಷ್ಟಿಯುತವನ್ನಾಗಿ ಮಾಡುವುದೇ ಎರಡನೇ ಹಂತದ ಮುಖ್ಯ ಉದ್ದೇಶ ಎಂದೂ ತಿಳಿದು ಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.