50 ವರ್ಷಗಳ ಹಿಂದೆ: ಬುಧವಾರ 10–11–1971

ಚೀನಾ ಜೊತೆ ಮಾಮೂಲು ಬಾಂಧವ್ಯ, ರಾಯಭಾರಿ ವಿನಿಮಯಕ್ಕೆ ಭಾರತ ಸಿದ್ಧ
ಪ್ಯಾರಿಸ್, ನ. 9– ಎರಡೂ ದೇಶಗಳ ನಡುವಣ ಗಡಿ ಸಮಸ್ಯೆಯ ಇತ್ಯರ್ಥಕ್ಕೆ ಕಾಯದೆಯೇ ಚೀನಾದ ಜೊತೆ ಮಾಮೂಲಿನ ಬಾಂಧವ್ಯವನ್ನು ಪುನರಾರಂಭಿಸಿ ರಾಯಭಾರಿಗಳ ನೇಮಕಕ್ಕೆ ಭಾರತ ಸಿದ್ಧವಿದೆಯೆಂದು ಪ್ರಧಾನಮಂತ್ರಿ, ಶ್ರೀಮತಿ ಇಂದಿರಾ ಗಾಂಧಿ ಅವರು ಇಂದು ಇಲ್ಲಿ ತಿಳಿಸಿದರು.
ಚೀನಾದ ಜೊತೆ ಮಮೂಲಿನ ರಾಜತಾಂತ್ರಿಕ ಬಾಂಧವ್ಯದ ಪುನರಾರಂಭಕ್ಕೆ ಫ್ರಾನ್ಸಿನ ಪ್ರಭಾವವನ್ನು ಬಳಸಿಕೊಳ್ಳಲು ಭಾರತ ಇಚ್ಛಿಸುವುದೇ ಎಂದು ಪ್ರಶ್ನಿಸಲು ರಾಯಭಾರಿ ಪ್ರತಿನಿಧಿ ಮಟ್ಟದಲ್ಲಿ ಭಾರತ ಚೀನಾದ ಜೊತೆ ಈಗಾಗಲೇ ಬಾಂಧವ್ಯವಿಟ್ಟುಕೊಂಡಿದೆಯೆಂದು ಶ್ರೀಮತಿ ಗಾಂಧಿ ನುಡಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.