ಬೆಂಗಳೂರು, ಡಿ. 12– ಕರ್ನಾಟಕ ಕಂಡ ಅತ್ಯಂತ ವರ್ಣರಂಜಿತ ರಾಜಕಾರಣಿ, ಮಾಜಿ ಮುಖ್ಯಮಂತ್ರಿ ಮತ್ತು ಹಿರಿಯ ಸಮಾಜವಾದಿ ಧುರೀಣ ಜಯದೇವಪ್ಪ ಹಾಲಪ್ಪ ಪಟೇಲ್ (71) ಇನ್ನಿಲ್ಲ.

ಕಳೆದ 12 ದಿನಗಳಿಂದ ಪಿತ್ತಕೋಶದ ಸಮಸ್ಯೆಯಿಂದ ತೀವ್ರ ಅಸ್ವಸ್ಥರಾಗಿದ್ದ ಅವರು, ಇಲ್ಲಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಇಂದು ಬೆಳಗಿನ ಜಾವ 2.30ಕ್ಕೆ ಅಸುನೀಗಿದರು. ಕಳೆದ ಒಂದು ವರ್ಷದಿಂದ ಕಾಮಾಲೆ ರೋಗದಿಂದ ಬಳಲಿದ ಅವರು ಈಚೆಗೆ ರಸ್ತೆ ಅಪಘಾತದಲ್ಲಿ ತಮ್ಮ ಇಬ್ಬರು ಸಹೋದರಿಯರು ಮತ್ತು ಮೊಮ್ಮಗಳನ್ನು ಕಳೆದುಕೊಂಡ ನಂತರ ತೀವ್ರ ಜರ್ಜರಿತರಾಗಿದ್ದರು. ಅವರ ಅಂತ್ಯಕ್ಷಣಗಳಲ್ಲಿ ಪತ್ನಿ ಸರ್ವಮಂಗಳಾ, ಪುತ್ರ ಮಹಿಮ ಪಟೇಲ್ ಬಳಿ ಇದ್ದರು. ಪಟೇಲರು ಪತ್ನಿ ಮತ್ತು ಮೂವರು ಪುತ್ರರನ್ನು ಅಗಲಿದ್ದಾರೆ.

ನಾಲ್ವರು ಬಾಲಕರ ಶವ ಪತ್ತೆ

ಚಾಮರಾಜನಗರ, ಡಿ. 12– ತಾಲ್ಲೂಕಿನ ಚಂದಕವಾಡಿ ಗ್ರಾಮದ ಬಳಿಯಿರುವ ಹೊನ್ನೊಳೆ ನದಿಯಲ್ಲಿ ಸ್ನಾನ ಮಾಡಲೆಂದು ನದಿಗೆ ಇಳಿದ ನಾಲ್ವರು ಬಾಲಕರು ಈಜು ಬಾರದೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು, ಮತ್ತೊಬ್ಬ ಬಾಲಕ ಅಪಾಯದಿಂದ ಪಾರಾಗಿರುವ ಘಟನೆ ನಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.