ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ 25 ವರ್ಷಗಳ ಹಿಂದೆ: ಗುರುವಾರ, 11–1–1996

Last Updated 10 ಜನವರಿ 2021, 19:30 IST
ಅಕ್ಷರ ಗಾತ್ರ

ಕಾವೇರಿ: ಕಾಲಾವಕಾಶಕ್ಕೆ ತಜ್ಞರ ತಂಡದ ಕೋರಿಕೆ

ನವದೆಹಲಿ, ಜ. 10– ಕರ್ನಾಟಕ ಮತ್ತು ತಮಿಳುನಾಡಿನಲ್ಲಿಯ ಕಾವೇರಿ ಜಲಾಶಯಗಳ ನೀರಿನ ಮಟ್ಟ ಮತ್ತು ಬೆಳೆ ಪರಿಸ್ಥಿತಿಯ ಅಧ್ಯಯನ ಮಾಡಲು ನೇಮಕಗೊಂಡಿದ್ದ ಡಾ. ವೈ.ಕೆ.ಅಲಘ್‌ ನೇತೃತ್ವದ ತಂಡವು ಇಂದು ಸಂಜೆ ಪ್ರಧಾನಿ ಪಿ.ವಿ.ನರಸಿಂಹ ರಾವ್‌ ಅವರನ್ನು ಭೇಟಿ ಮಾಡಿ, ವರದಿ ಸಲ್ಲಿಸಲು ಮತ್ತೆ ಒಂದೆರಡು ದಿನಗಳ ಕಾಲಾವಕಾಶ ಕೋರಿತೆಂದು ಅಧಿಕೃತವಾಗಿ ಗೊತ್ತಾಗಿದೆ.

ತಂಡದ ನಾಯಕ ಡಾ. ಅಲಘ್‌, ಡಾ. ಭರತ್‌ ಸಿಂಗ್ ಮತ್ತು ಕೇಪ್ರಿಹಾನ್‌ ಅವರು ಪ್ರಧಾನಿ ಅವರಿಗೆ ತಾವು ಕಂಡ ಸೂಕ್ಷ್ಮವಾದ ಪರಿಸ್ಥಿತಿಯನ್ನು ವಿವರಿಸಿದರು. ಎರಡೂ ರಾಜ್ಯಗಳಲ್ಲಿನ ನೀರಿನ ಲಭ್ಯತೆ ಬಗ್ಗೆ ಅಧಿಕಾರಿಗಳನ್ನು ಕಳುಹಿಸಿ ಮಾಹಿತಿ ಸಂಗ್ರಹಿಸಲು ತಂಡ ನಿರ್ಧರಿಸಿದೆ.

10 ವರ್ಷದೊಳಗೆ ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆ: ಪ್ರಧಾನಿ ವಿಶ್ವಾಸ

ನವದೆಹಲಿ, ಜ. 10 (ಪಿಟಿಐ)– ರಕ್ಷಣಾ ತಂತ್ರಜ್ಞಾನದಲ್ಲಿ ಭಾರತವು 2005ರ ವೇಳೆಗೆ ಅಥವಾ ಅದಕ್ಕೆ ಮೊದಲೇ ಸ್ವಾವಲಂಬನೆ ಸಾಧಿಸುವುದು ಎಂದು ಪ್ರಧಾನಿ ಪಿ.ವಿ.ನರಸಿಂಹ ರಾವ್‌ ಅವರು ಭರವಸೆ ವ್ಯಕ್ತಪಡಿಸಿದರು.

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ (ಡಿಆರ್‌ಡಿಒ) ನಿರ್ದೇಶಕರ 22ನೇ ಸಮ್ಮೇಳನವನ್ನು ಉದ್ದೇಶಿಸಿ ಪ್ರಧಾನಿಯವರು ಮಾತನಾಡಿದರು. ರಕ್ಷಣಾ ಸಾಮಗ್ರಿಗಳ ಆಮದನ್ನು ಗಣನೀಯವಾಗಿ ಇಳಿಸಲಾಗುವುದು ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT