ಶನಿವಾರ, 2 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಷ್ಯನ್ ಕ್ರೀಡಾಕೂಟ: ವುಶು- ಪದಕ ಖಚಿತಪಡಿಸಿಕೊಂಡ ರೊಶಿಬಿನಾ ದೇವಿ

ವುಶು: ಎಂಟರ ಘಟ್ಟಕ್ಕೆ ಸೂರ್ಯಭಾನು
Published 25 ಸೆಪ್ಟೆಂಬರ್ 2023, 16:25 IST
Last Updated 25 ಸೆಪ್ಟೆಂಬರ್ 2023, 16:25 IST
ಅಕ್ಷರ ಗಾತ್ರ

ಹಾಂಗ್‌ಝೌ: ಭಾರತದ ನವೊರೆಮ್ ರೊಶಿಬಿನಾ ದೇವಿ ಅವರು ಏಷ್ಯನ್ ಕ್ರೀಡಾಕೂಟದ ವುಶು ಸ್ಪರ್ಧೆಯ ಮಹಿಳೆಯರ 60 ಕೆ.ಜಿ. ವಿಭಾಗದಲ್ಲಿ ಸೋಮವಾರ ಸೆಮಿಫೈನಲ್‌ಗೆ ಅರ್ಹತೆ ಪಡೆದಿದ್ದು, ಭಾರತಕ್ಕೆ ಮತ್ತೊಂದು ಪದಕ ಖಚಿತವಾಗಿದೆ.

ಅವರು ಕ್ವಾರ್ಟರ್‌ಫೈನಲ್‌ನಲ್ಲಿ ಕಜಕಸ್ತಾನದ ಯಿಮನ್ ಕರ್ಶಿಗಾ ಅವರನ್ನು ಪಾಯಿಂಟ್‌ಗಳ ಆಧಾರದಲ್ಲಿ ಸೋಲಿಸಿದರು. ರೊಶಿಬಿನಾ ದೇವಿ ಅವರು ಈ ಹಿಂದಿನ ಜಕಾರ್ತಾ ಕ್ರೀಡೆಗಳಲ್ಲಿ ಇದೇ ತೂಕ ವಿಭಾಗದಲ್ಲಿ ಕಂಚಿನ ಪದಕ ಪಡೆದಿದ್ದರು.

ಪುರುಷರ 60 ಕೆ.ಜಿ. ಸಾಂಡ ವಿಭಾಗದಲ್ಲಿ ಸೂರ್ಯಭಾನು ಪ್ರತಾಪ್ ಸಿಂಗ್ ಅವರು ಪ್ರಿಕ್ವಾರ್ಟರ್‌ಫೈನಲ್‌ನಲ್ಲಿ ಉಜ್ಬೇಕಿಸ್ತಾನದ ಇಸ್ಲೊಮ್‌ಬೆಕ್‌ ಖಾಯ್ದರೊವ್ ಅವರನ್ನು ಸೋಲಿಸಿ ಎಂಟರ ಘಟ್ಟ ತಲುಪಿದರು. ಮೂರು ಸುತ್ತುಗಳಲ್ಲಿ ಅವರು 2–1 ರಿಂದ ಜಯಗಳಿಸಿದರು. ಪ್ರತಾಪ್ ಸಹ 2019ರ ಕ್ರೀಡೆಗಳಲ್ಲಿ ಕಂಚಿನ ಪದಕ ಗಳಿಸಿದ್ದರು. 2016ರ ದಕ್ಷಿಣ ಏಷ್ಯಾ ಕ್ರೀಡೆಗಳಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದರು.

ದಿನದ ಅಂತಿಮ ಸೆಣಸಾಟವಾದ 65 ಕೆ.ಜಿ. ವಿಭಾಗದಲ್ಲಿ ವಿಕ್ರಮ್ ಬಲಿಯಾನ್, ಇಂಡೊನೇಷ್ಯಾದ ಸಾಮ್ಯುಯೆಲ್ ಮಾರ್ಬನ್ ಅವರಿಗೆ 1–2 ರಲ್ಲಿ ಮಣಿದರು. ಬಲಿಯಾನ್ 2019ರ ವಿಶ್ವ ವುಶು ಚಾಂಪಿಯನ್‌ಷಿಪ್ಸ್‌ನಲ್ಲಿ ಕಂಚಿನ ಪದಕ ಗಳಿಸಿದ್ದರು. ಅದೇ ವರ್ಷ ದಕ್ಷಿಣ ಏಷ್ಯಾ ಕ್ರೀಡೆಗಳಲ್ಲಿ ಚಿನ್ನದ ಪದಕವನ್ನೂ ಗೆದ್ದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT