ಬುಧವಾರ, ನವೆಂಬರ್ 30, 2022
17 °C

25 ವರ್ಷಗಳ ಹಿಂದೆ: ಶನಿವಾರ 27.9.1997

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಂಡೊನೇಷ್ಯಾ ವಿಮಾನ ದುರಂತ 234 ಪ್ರಯಾಣಿಕರು ಸಾವು

ಜಕಾರ್ತ, ಸೆ. 26 (ಎಪಿ, ಎಎಫ್‌ಪಿ)– ಇಂಡೊನೇಷ್ಯಾದ ಉತ್ತರಕ್ಕಿರುವ ಸುಮಾತ್ರಾ ದ್ವೀಪದಲ್ಲಿ ಇಂದು ಸಂಭವಿಸಿದ ಭೀಕರ ವಿಮಾನ ದುರಂತದಲ್ಲಿ ಚಾಲಕ ವರ್ಗದ 12 ಮಂದಿ ಸೇರಿದಂತೆ ಎಲ್ಲ 234 ಪ್ರಯಾಣಿಕರು ಮೃತಪಟ್ಟಿದ್ದಾರೆ.

ಇಂಡೊನೇಷ್ಯಾದ ‘ಗರುಡ’ ಏರ್‌ ಲೈನ್ಸ್‌ಗೆ ಸೇರಿದ ಜಿಎ– 152 ಏರ್ ಬಸ್ ಮೆಡಾನ್ ಪಟ್ಟಣದ ಪೊಲೊನಿಯಾ ನಿಲ್ದಾಣದಲ್ಲಿ ಇಳಿಯುವ ಯತ್ನದಲ್ಲಿದ್ದಾಗ ಭಾರಿ ಕಾಳ್ಗಿಚ್ಚಿನಿಂದ ಆವರಿಸಿದ್ದ ದಟ್ಟ ಹೊಗೆಯಿಂದಾಗಿ ಮರಕ್ಕೆ ಅಪ್ಪಳಿಸಿ ಸ್ಫೋಟಗೊಂಡಿತು ಎಂದು ಏರ್‌ಲೈನ್ಸ್ ಅಧಿಕಾರಿಗಳು ತಿಳಿಸಿದ್ದಾರೆ.

ಇಂಡೊನೇಷ್ಯಾದಲ್ಲಿ ಉಂಟಾಗಿರುವ ಕಾಳ್ಗಿಚ್ಚಿನಿಂದಾಗಿ ಎದ್ದಿರುವ ದಟ್ಟ ಹೊಗೆ ಈ ಭೀಕರ ದುರಂತಕ್ಕೆ ಕಾರಣ ಎಂದೂ ಅಧಿಕಾರಿಗಳು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು