ಭಾನುವಾರ, ಸೆಪ್ಟೆಂಬರ್ 19, 2021
29 °C

ಹೊಸ ಸ್ವರೂಪದ ಜಾತೀಯತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸರ್ಕಾರಿ ಪ್ರಾಯೋಜಿತ ಜಯಂತಿಗಳ ಒಟ್ಟು ಸಂಖ್ಯೆ 30ರ ಆಸುಪಾಸಿನಲ್ಲಿ ಇರುವುದನ್ನು ನೋಡಿದರೆ (ಪ್ರ.ವಾ., ಜ. 3), ನಮ್ಮ ಸರ್ಕಾರವು ಸಮಾಜವನ್ನು ಹೊಸ ಸ್ವರೂಪದ ಜಾತೀಯತೆಯತ್ತ ಕೊಂಡೊಯ್ಯಲು ಪ್ರಯತ್ನಿಸುತ್ತಿರುವಂತಿದೆ. ಇದು ಚರ್ಚಾರ್ಹ ಸಂಗತಿ.

ಮಹಾಪುರುಷರು ಎಂದು ಪರಿಗಣಿಸಿರುವುದು ಅವರು ಎಲ್ಲಾ ಜಾತಿ-ಧರ್ಮಗಳ ಎಲ್ಲೆಯನ್ನು ಮೀರಿ ನಿಸ್ವಾರ್ಥದಿಂದ ತಮ್ಮ ಸರ್ವಸ್ವವನ್ನೂ ಧಾರೆ ಎರೆದು ಸಮಾಜವನ್ನು ಮುನ್ನಡೆಸಿದರು ಎಂಬ ಕಾರಣಕ್ಕೆ. ಅಂತಹವರ ಬಗ್ಗೆ ನಾಡಿನ ಎಲ್ಲರಿಗೂ ಅಭಿಮಾನ ಇರುತ್ತದೆ. ಅವರ ಜಯಂತಿಯನ್ನು ಸರ್ಕಾರಿ ಪ್ರಾಯೋಜಕತ್ವದಲ್ಲಿ ಆಚರಿಸಿದರೆ ಮಾತ್ರ ಆ ಸಾಧಕರಿಗೆ ಗೌರವ ಸಲ್ಲುತ್ತದೆ ಎಂಬ ಮನೋಭಾವ ಸರಿಯಲ್ಲ. ಬದಲಾಗಿ, ಅವರ ತತ್ವ- ಸಿದ್ಧಾಂತ, ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದರಲ್ಲಿ ಅವರ ಸ್ಮರಣೆಯ ಸಾರ್ಥಕ್ಯವನ್ನು ಕಾಣಬೇಕಾಗಿದೆ.

–ಡಿ.ಎಂ.ಬಸೆಟ್ಟೆಪ್ಪ, ಎಚ್.ವೀರಾಪುರ, ಕುರುಗೋಡು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು