ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಪರಿಹಾರ ಒದಗಿಸಬೇಕಾದವರೇ ಸಮಸ್ಯೆಯಾದರೆ...

Last Updated 9 ನವೆಂಬರ್ 2020, 19:30 IST
ಅಕ್ಷರ ಗಾತ್ರ

ಅಕ್ರಮವಾಗಿ ಆಸ್ತಿ ಗಳಿಸಿದ್ದಾರೆ ಎಂಬ ಸುಳಿವಿನ ಮೇರೆಗೆ ಅಧಿಕಾರಿಗಳ ಮನೆ–ಕಚೇರಿ ಮೇಲೆ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ಆಗಾಗ್ಗೆ ದಾಳಿ ಮಾಡುವುದುಂಟು. ಇದು, ಸ್ವಾಗತಾರ್ಹ. ಸರ್ಕಾರದ ವಿವಿಧ ಹುದ್ದೆಗಳಲ್ಲಿ ಇರುವವರು ತಮಗೆ ವಹಿಸಿದ ಕೆಲಸವನ್ನು ದಕ್ಷತೆಯಿಂದ, ಪ್ರಾಮಾಣಿಕತೆಯಿಂದ ನಿರ್ವಹಿಸಬೇಕು. ಜನರ ಕಷ್ಟಕಾರ್ಪಣ್ಯಗಳಿಗೆ ಪರಿಹಾರ ಒದಗಿಸಬೇಕೇ ವಿನಾ ಇವರೇ ದೊಡ್ಡ ಸಮಸ್ಯೆ ಆಗಬಾರದು. ಸ್ವಸ್ಥ ಸಮಾಜಕ್ಕೆ ಮಾದರಿಯಾಗಬೇಕಾದ ಆಧಿಕಾರಿಗಳು ಲಂಚದ ಕೂಪಕ್ಕೆ ಪದೇ ಪದೇ ಸಿಕ್ಕಿ ಬೀಳುತ್ತಿರುವುದರಿಂದ, ಸರ್ಕಾರಿ ಉದ್ಯೋಗದಲ್ಲಿರುವವರ ಬಗ್ಗೆ ಜನಸಾಮಾನ್ಯರಲ್ಲಿ ನಕಾರಾತ್ಮಕ ಭಾವನೆ ಮೂಡುತ್ತಿದೆ.

ಆದರೆ, ಈ ವಿಷಯದಲ್ಲಿ ವ್ಯವಸ್ಥೆಯ ಕಡೆಗಷ್ಟೇ ಕೈ ತೋರಿಸುವ ಬದಲು ನಾಗರಿಕ ಸಮಾಜ ಮೊದಲು ಬದಲಾಗಬೇಕಾಗಿದೆ. ಲಂಚ ಕೇಳಿದರೆ ಅಂತಹವರ ವಿರುದ್ಧ ಪಟ್ಟು ಬಿಡದೆ ದೂರು ನೀಡಬೇಕು. ಆರೋಪ ಸಾಬೀತಾದರೆ ಅಂಥವರನ್ನು ಸರ್ಕಾರವು ಶಾಶ್ವತವಾಗಿ ಕೆಲಸದಿಂದ ವಜಾ ಮಾಡಲಿ. ಕಠಿಣವಾದ ಶಿಕ್ಷೆ ವಿಧಿಸಲು ಅನುವಾಗುವಂತೆ ಕಾನೂನು ಬಿಗಿಗೊಳಿಸಲಿ.

–ಅನಿಲ್ ಕುಮಾರ್, ನಂಜನಗೂಡು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT