ಶುಕ್ರವಾರ, ಜೂನ್ 18, 2021
24 °C

ವಾಚಕರ ವಾಣಿ | ಹಿರಿಯರ ಸ್ವಾಭಿಮಾನಕ್ಕೆ ಚ್ಯುತಿ ಬಾರದಿರಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಾಯಿಯನ್ನು ನಿರ್ಲಕ್ಷಿಸಿದ ಕಾರಣಕ್ಕಾಗಿ, ಪುತ್ರನ ಪಿತ್ರಾರ್ಜಿತ ಆಸ್ತಿಯನ್ನು ತಾಯಿಯ ಹೆಸರಿಗೆ ವರ್ಗಾಯಿಸುವಂತೆ ತಿಳಿಸಿರುವ ಕೋರ್ಟ್ ಆದೇಶ (ಪ್ರ.ವಾ., ಆ. 7) ಘನವಾದುದು. ಹತ್ತು ಕುಟುಂಬಗಳಲ್ಲಿ ಸರಾಸರಿ ಐದರಿಂದ ಆರು ಕುಟುಂಬಗಳು ಆಸ್ತಿ ಕಾರಣಕ್ಕಾಗಿ ಹೆತ್ತವರ ನಿರ್ಲಕ್ಷ್ಯ ಮಾಡುತ್ತಿವೆ. ಆಸ್ತಿ ಸಿಗುವ ಮುನ್ನ ಒಂದು ವರ್ತನೆ, ಸಿಕ್ಕ ಮೇಲೆ ಬಣ್ಣ ಬದಲಾವಣೆ!

ವೃದ್ಧ ತಂದೆತಾಯಿಯನ್ನು ಆಸ್ತಿಗಾಗಿಯೇ ನೋಡಿಕೊಳ್ಳುವುದು, ಅದು ಸಿಕ್ಕ ನಂತರ ಅವರನ್ನು ದೂರ ಇಡುವ ನೀಚ ಪ್ರವೃತ್ತಿಯಿಂದ ಭಾರತೀಯ ಕೌಟುಂಬಿಕ ಸಾಮರಸ್ಯ ಕದಡಿಹೋಗಿದೆ. ರಾಯಚೂರಿನ ಉಪವಿಭಾಗಾಧಿಕಾರಿಯವರ ಈ ಆದೇಶ ಎಲ್ಲಾ ಮಕ್ಕಳಿಗೂ ಅನ್ವಯ ಆಗುವಂತೆ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಲಿ. ಈ ಮೂಲಕ ಹಿರಿಯ ನಾಗರಿಕರ ಸ್ವಾಭಿಮಾನದ ಬದುಕಿಗೆ ಚ್ಯುತಿ ಬಾರದಂತೆ ನೋಡಿಕೊಳ್ಳಲಿ.

-ಸಂತೆಬೆನ್ನೂರು ಫೈಜ್ನಟ್ರಾಜ್, ಸಂತೆಬೆನ್ನೂರು

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು