ಶುಕ್ರವಾರ, ಡಿಸೆಂಬರ್ 4, 2020
22 °C

ವಾಚಕರ ವಾಣಿ: ಅಸಭ್ಯ ವರ್ತನೆ ಖಂಡನೀಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ ಪುರಸಭೆಯ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಸಂದರ್ಭದಲ್ಲಿ, ಮತದಾನ ಮಾಡಲು ಬಂದ ತಮ್ಮದೇ ಪಕ್ಷದ ಸದಸ್ಯೆಯೊಬ್ಬರನ್ನು ಶಾಸಕ ಮತ್ತು ಅವರ ಬೆಂಬಲಿಗರು ಎಳೆದಾಡಿದ್ದಾರೆ ಎನ್ನಲಾದ ಸುದ್ದಿ ನಾಚಿಕೆಗೇಡಿನದು ಮತ್ತು ಖಂಡನೀಯವಾದದ್ದು. ಮಹಿಳಾ ಜನಪ್ರತಿನಿಧಿಯನ್ನು ಪೊಲೀಸರ ಮುಂದೆಯೇ ಹೀಗೆ ಎಳೆದಾಡಿದಾಗ ಅವರಿಗೆ ರಕ್ಷಣೆ ಸಿಗದಿದ್ದರೆ ಸಾಮಾನ್ಯ ಜನರ ಪಾಡೇನು? ಇಂತಹ ಪ್ರಕರಣಗಳು ಮುಂದಿನ ದಿನಗಳಲ್ಲಿ ರಾಜಕೀಯ ಪ್ರವೇಶಿಸಲು ಬಯಸುವ ಮಹಿಳೆಯರಲ್ಲಿ ಭಯ ಬಿತ್ತುತ್ತವೆ.

ಅಧಿಕಾರ ಇರುವುದು ಜನರ ಸೇವೆಗಾಗಿಯೇ ವಿನಾ ಅಹಂಕಾರ ಪ್ರದರ್ಶಿಸಲು ಅಲ್ಲ. ಮಹಿಳೆಯರನ್ನು ಗೌರವಿಸುವುದು ನಮ್ಮ ಸಂಸ್ಕೃತಿ. ದಾಳಿಕೋರರಿಗೆ ಕಾನೂನಿನ ಪ್ರಕಾರ ಶಿಕ್ಷೆಯಾಗಲಿ. ಮುಂದಿನ ದಿನಗಳಲ್ಲಾದರೂ ಇಂತಹ ಪ್ರಸಂಗಗಳು ಮರುಕಳಿಸದಿರಲಿ.

–ಇರ್ಫಾನ್ ರೋಣ, ಬೆಂಗಳೂರು

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು