ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಚನಾತ್ಮಕ ಅಭಿಪ್ರಾಯ ಸಂಗ್ರಹಿಸಿ

Last Updated 4 ಫೆಬ್ರುವರಿ 2022, 19:31 IST
ಅಕ್ಷರ ಗಾತ್ರ

ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಬಾಡಿಗೆಯನ್ನು ವೈಜ್ಞಾನಿಕವಾಗಿ ಹೆಚ್ಚಿಸುವುದು ಸ್ವಾಗತಾರ್ಹ. ಏಕೆಂದರೆ, ಇಂತಹ ಸುಸಜ್ಜಿತ ರಂಗಮಂದಿರವು ಪ್ರಸ್ತುತ ಕಡಿಮೆ ದರಕ್ಕೆ ರಂಗಾಸಕ್ತರ ಕೈಗೆ ಎಟಕುತ್ತಿದೆ.

ಈಗ ಅದರ ಬಾಡಿಗೆ ದರವು ₹ 3,000 ಇದೆ. ಇದನ್ನು ₹ 5,000ದಿಂದ 10,000ದವರೆಗೆ ಹೆಚ್ಚಳ ಮಾಡಲು ಯೋಜಿಸಲಾಗಿದೆ. ಆದರೆ ಇದು ದುಬಾರಿ ದರವಾಗುತ್ತದೆ. ಲಾಗಾಯ್ತಿನಿಂದಲೂ ಇರುವ ಬಾಡಿಗೆಯನ್ನು ಹೆಚ್ಚಳ ಮಾಡದೇ ಇರುವುದು ಪ್ರಾಯೋ ಗಿಕ ಅಲ್ಲ. ಒಬ್ಬ ವ್ಯಕ್ತಿ ತನ್ನ ಪ್ರಭಾವ ಬಳಸಿ ಹಲವು ಬಾರಿ ರಂಗಮಂದಿರವನ್ನು ಕಡಿಮೆ ದರಕ್ಕೆ ಬಾಡಿಗೆಗೆ ಪಡೆದು ಅವ್ಯವಹಾರ ಮಾಡಬಹುದಾದ ಸಾಧ್ಯತೆ ಇರುತ್ತದೆ. ಇದನ್ನು ತಪ್ಪಿಸಿ, ಪ್ರಾಮಾಣಿಕ ರಂಗಕಲಾವಿದರು, ಅಶಕ್ತ ಸಾಮಾಜಿಕ ಸಂಸ್ಥೆಗಳಿಗೆ ಉತ್ತೇಜನ ನೀಡಬೇಕಾದಲ್ಲಿ, ರಚನಾತ್ಮಕ ಅಭಿಪ್ರಾಯ ಸಂಗ್ರಹಿಸಿ ನಂತರ ಪರಿಷ್ಕೃತ ದರ ನಿಗದಿಪಡಿಸುವುದು ಒಳ್ಳೆಯದು.

ಆರ್.ವೆಂಕಟರಾಜು,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT