ಗುರುವಾರ , ಆಗಸ್ಟ್ 18, 2022
25 °C

ಹಾಸ್ಯವೆಂದರೆ ದ್ವಂದ್ವಾರ್ಥವಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೃಶ್ಯ ಮಾಧ್ಯಮಗಳಲ್ಲಿ ಹಾಸ್ಯಮಾಲಿನ್ಯದ ಬಗ್ಗೆ ಯೋಗಾನಂದ ಅವರು ಪ್ರಸ್ತಾಪಿಸಿರುವುದು (ಸಂಗತ, ಜೂನ್‌ 25) ಗಂಭೀರವಾದ ಸಂಗತಿ. ಇಂದಿನ ಹಾಸ್ಯ ಕಾರ್ಯಕ್ರಮಗಳಲ್ಲಿ ಒಂದೋ ಯಾರಾದರೊಬ್ಬರನ್ನು ಹೀಯಾಳಿಸುವುದು, ಇಲ್ಲವಾದರೆ ‘ಡಬಲ್ ಮೀನಿಂಗ್’ ಸಂಭಾಷಣೆಗಳೇ ಹಾಸ್ಯದ ವಸ್ತುವಿಷಯವಾಗಿರುತ್ತವೆ.

ಚಾರ್ಲಿ ಚಾಪ್ಲಿನ್, ಮಿಸ್ಟರ್ ಬೀನ್, ಟಾಮ್ ಆ್ಯಂಡ್‌ ಜರ್‍ರಿಯಂತಹ ಪ್ರಸಿದ್ಧ ಹಾಸ್ಯ ಕಾರ್ಯಕ್ರಮಗಳಲ್ಲಿ ತಮ್ಮನ್ನು ತಾವೇ ಇಕ್ಕಟ್ಟಿನಲ್ಲಿ ಸಿಕ್ಕಿಸಿಕೊಂಡು ಸೃಜಿಸುವ ಹಾಸ್ಯ ಎಷ್ಟು ಸೃಜನಾತ್ಮಕವಾಗಿಲ್ಲವೇ? ಅಲ್ಲಿ ಇನ್ನೊಬ್ಬರಿಗೆ ನೋವುಂಟು ಮಾಡುವುದಾಗಲೀ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡುವುದಾಗಲೀ ಹೀಯಾಳಿಸುವುದಾಗಲೀ ದ್ವಂದ್ವಾರ್ಥದ ಹಾಸ್ಯವಾಗಲೀ ಇಲ್ಲವೇ ಇಲ್ಲ. ಆದರೂ ಇಂದಿಗೂ ಅವರ ಹಾಸ್ಯಗಳು ಪ್ರೇಕ್ಷಕರನ್ನು ನಗಿಸುತ್ತಿಲ್ಲವೇ? ಹಾಸ್ಯವೆಂದರೆ ಅಶ್ಲೀಲವಲ್ಲ.

-ಈರಣ್ಣ ಎನ್.ವಿ., ಶಿರಾ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.