ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್ ಮೈಕೊಡವಿ ಮೇಲೇಳಬೇಕಾಗಿದೆ

Last Updated 7 ಸೆಪ್ಟೆಂಬರ್ 2020, 16:43 IST
ಅಕ್ಷರ ಗಾತ್ರ

ಕಾಂಗ್ರೆಸ್ ಪಕ್ಷ ಬಲಹೀನವಾಗಿದೆ. ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ದೈಹಿಕವಾಗಿ ನಿತ್ರಾಣರಾಗಿದ್ದಾರೆ. ರಾಹುಲ್ ಪಟ್ಟ ಬೇಡ ಎಂದು ಹಿಂದೆ ಸರಿದಿದ್ದಾರೆ. ಮಧ್ಯಪ್ರದೇಶದಲ್ಲಿ ಸಿಕ್ಕಿದ್ದ ಅಧಿಕಾರವು ವ್ಯಕ್ತಿ ದ್ವೇಷದಿಂದ, ಸ್ವಾರ್ಥದಿಂದ ಕೈಜಾರಿದೆ. ರಾಜಸ್ಥಾನದಲ್ಲಿ ಕೊನೆ ಗಳಿಗೆಯಲ್ಲಿ ಅಧಿಕಾರ ಉಳಿಸಿಕೊಂಡಿದೆ. ಪಕ್ಷದ ಈ ಹೀನಾಯ ಸ್ಥಿತಿಯನ್ನು ದೂರ ಮಾಡಿ, ಹೊಸ ಹುರುಪಿನಿಂದ ಎಲ್ಲರೊಡಗೂಡಿ ಹೋರಾಡೋಣ ಎಂದು ಕೆಲವರು ಹೇಳಿದರೆ, ಚಪ್ಪಾಳೆ ತಟ್ಟುವವರು ಇದಕ್ಕೆ ಬೇರೆ ಅರ್ಥ ಕೊಟ್ಟು, ಇರುವ ಹಿರಿಯ ನಾಯಕರನ್ನೇ ನೇಪಥ್ಯಕ್ಕೆ ತಳ್ಳಿದರೆ ಪಕ್ಷ ಇನ್ನಷ್ಟು ನಿಶ್ಶಕ್ತಗೊಳ್ಳುವುದಿಲ್ಲವೇ?

ದೇಶದಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚುತ್ತಿದೆ.ಅರ್ಥವ್ಯವಸ್ಥೆ ಹಳಿ ತಪ್ಪಿದೆ. ವಿರೋಧ ಪಕ್ಷವಾಗಿ ಜನರ ದನಿಯಾಗಲು ಸಮರ್ಥ ನಾಯಕತ್ವಕ್ಕೆ ಜನರು ಎದುರು ನೋಡುತ್ತಿದ್ದಾರೆ. ಇದನ್ನು ಕಾಂಗ್ರೆಸ್‌ ಮುಖಂಡರು ಅರಿತು ಸ್ಪಂದಿಸಬೇಕಲ್ಲವೇ?

– ಕೆ.ಎನ್. ಭಗವಾನ್,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT