ಭಾನುವಾರ, ಸೆಪ್ಟೆಂಬರ್ 26, 2021
27 °C

ಸ್ವೀಡನ್‌ ನೀತಿ ಗೌರವಾರ್ಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊರೊನಾ ಸೋಂಕು ತಡೆಗಟ್ಟುವ ವಿಚಾರದಲ್ಲಿ ಸ್ವೀಡನ್ ಅನುಸರಿಸುತ್ತಿರುವ ಭಿನ್ನ ಪಥ (ಸಂಗತ, ಏ. 28) ಆಸಕ್ತಿದಾಯಕ. ಅಂತರ ಕಾಯ್ದುಕೊಂಡು ಆ ಮೂಲಕ ಕೊರೊನಾ ಸೋಂಕು ತಗುಲದಂತೆ ನೋಡಿಕೊಳ್ಳುವ ಹೊಣೆಯನ್ನು ಜನರ ವಿವೇಚನೆಗೆ ಬಿಟ್ಟಿರುವುದು ಒಳ್ಳೆಯ ಕ್ರಮ. ತನ್ನ ಪ್ರಜೆಗಳನ್ನು ಅಲ್ಲಿನ ಸರ್ಕಾರ ಆ ಮಟ್ಟಿಗೆ ಸಜ್ಜುಗೊಳಿಸಿರುವುದು ಮೆಚ್ಚಬೇಕಾದ ಸಂಗತಿ.

ಸರ್ಕಾರ ಆದೇಶಿಸಿದೆ ಎಂಬ ಕಾರಣಕ್ಕೆ ಪಾಲಿಸುವುದಕ್ಕಿಂತ ಸ್ವಯಂ ನಿಯಂತ್ರಣ ಹೆಚ್ಚು ಪರಿಣಾಮಕಾರಿ. ಬೇರೆಯವರ ಮಾತಿಗಿಂತ ಜನ ಹೆಚ್ಚಾಗಿ ತಮ್ಮ ಮೇಲೆ ನಂಬಿಕೆ ಇಟ್ಟುಕೊಂಡಿರುತ್ತಾರೆ. ತಾವಾಗಿಯೇ ಎಚ್ಚರ ವಹಿಸಿ, ಪರಸ್ಪರ ಅಂತರ ಕಾಪಾಡಿಕೊಂಡು ಕೊರೊನಾದಿಂದ ರಕ್ಷಣೆ ಪಡೆಯುವುದು ಉತ್ತಮ ನಡೆ.

-ರವಿ ವಾಲಿಕಾರ, ಕೊಪ್ಪಳ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು