ಶುಕ್ರವಾರ, ಮೇ 29, 2020
27 °C

ವಾಚಕರ ವಾಣಿ| ಸೆನ್ಸರ್‌ ಚಾಲಿತ ಸಾಧನ ಅಭಿವೃದ್ಧಿಪಡಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊರೊನಾ ಸೋಂಕು ಸದ್ಯಕ್ಕೆ ದೂರವಾಗುವ ಸಾಧ್ಯತೆ ಇಲ್ಲವಾದ್ದರಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಾದುದು ಅತ್ಯಗತ್ಯವಾಗಿದೆ. ಆದರೆ ಜನರ ಈಗಿನ ಮನಃಸ್ಥಿತಿಯು ಸಾಮಾಜಿಕ ಅಂತರವನ್ನು ಸುಲಭವಾಗಿ ಸ್ವೀಕರಿಸಲು ಸಿದ್ಧವಾಗಿಲ್ಲ. ಹೀಗಾಗಿ, ಅವರಿಗೆ ಸೂಕ್ತ ತಿಳಿವಳಿಕೆ ನೀಡುವ ಕಾರ್ಯ ಅಷ್ಟು ಸುಲಭದ್ದಲ್ಲ.

ಈ ದಿಸೆಯಲ್ಲಿ, ವ್ಯಕ್ತಿಗಳ ನಡುವೆ ಅಂತರ ಕಾಯ್ದುಕೊಳ್ಳದೇ ಇದ್ದಾಗ ಎಚ್ಚರಿಕೆಯ ಗಂಟೆ ಹೊಡೆಯುವ ಸಾಧನವನ್ನು ಅಭಿವೃದ್ಧಿಪಡಿಸಬಹುದು. ಸೆನ್ಸರ್ ಚಾಲಿತ ತಂತ್ರಜ್ಞಾನದ ಮೇಲೆ ಕಾರ್ಯನಿರ್ವಹಿಸುವ ಇದನ್ನು ಕನಿಷ್ಠ ವೆಚ್ಚದೊಂದಿಗೆ ತಯಾರಿಸಬಹುದಾಗಿದೆ. ಈ ಸಾಧನವನ್ನು ಧರಿಸಿದರೆ ಇಬ್ಬರು ವ್ಯಕ್ತಿಗಳು ನಿಗದಿತ ಅಂತರಕ್ಕಿಂತ ಹೆಚ್ಚು ಹತ್ತಿರವಾದಾಗ ಅದು ಎಚ್ಚರಿಸುತ್ತದೆ. ಬಡವರಿಗೆ ಉಚಿತವಾಗಿ ಮತ್ತು ಇತರರಿಗೆ ರಿಯಾಯಿತಿ ದರದಲ್ಲಿ ಇದನ್ನು ವಿತರಿಸಬಹುದು. ಮನೆಯಿಂದ ಹೊರಗೆ ಬಂದಾಗಲೆಲ್ಲಾ ಈ ಸಾಧನವನ್ನು ಧರಿಸಲೇಬೇಕೆಂಬ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದು, ಪಾಲಿಸದಿದ್ದರೆ ದಂಡ ವಿಧಿಸಬೇಕು. ಇಂತಹ ಉಪಕರಣವನ್ನು ಇಟಲಿಯಲ್ಲಿ ಈಗಾಗಲೇ ಅಭಿವೃದ್ಧಿಪಡಿಸಲಾಗಿದೆ. ಜನರಲ್ಲಿ ಜಾಗರೂಕತೆ ಮೂಡಿಸಲು ಈ ಸಾಧನ ಸಹಕಾರಿ.

-ಡಾ. ವೇಣು, ಬೆಂಗಳೂರು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು