ಸೋಮವಾರ, ಏಪ್ರಿಲ್ 19, 2021
32 °C

ಗಣಪನ ಮೂರ್ತಿಗೇಕೆ ಶೋಕಿ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಣೇಶನ ಹಬ್ಬಕ್ಕಾಗಿ ವಿವಿಧ ಬಗೆಯ ಗಣೇಶ ಮೂರ್ತಿಗಳನ್ನು ಮಾಡಿ ಜನರನ್ನು ಆಕರ್ಷಿಸುವುದು ಇತ್ತೀಚಿನ ವರ್ಷಗಳಲ್ಲಿ ವಾಡಿಕೆಯಾಗಿದೆ. ರೈತ ಗಣೇಶ, ಪೊಲೀಸ್ ಗಣೇಶ, ವೀರಪ್ಪನ್ ಗಣೇಶ, ಕೈಯಲ್ಲಿ ಗನ್ ಹಿಡಿದಿರುವ ಗಣೇಶ, ಕೂಲಿಂಗ್ ಗ್ಲಾಸ್ ಹಾಕಿದ ಗಣಪ... ಹೀಗೆ ಹಲವಾರು ಮೂರ್ತಿಗಳನ್ನು ತಯಾರಿಸಲಾಗುತ್ತದೆ. ಪುರಾಣದ ಪ್ರಕಾರ ಗಣೇಶ ಅಂದರೆ, ಆನೆ ಸೊಂಡಿಲಿನ ಮುಖ, ಚಿಕ್ಕ ಕಣ್ಣು, ಮೊರದಗಲ ಕಿವಿ, ಹೊಟ್ಟೆಯಲ್ಲಿ ಹಾವು ಸುತ್ತಿರುವುದು, ಕೆಳಗೆ ಮೂಷಿಕ ವಾಹನ. ಈ ತರಹದ ಗಣೇಶನನ್ನು ನೋಡಿದರೆ ಭಕ್ತಿ ಭಾವ ಮೂಡುತ್ತದೆ. ಇಂದಿನ ಪುಟ್ಟ ಮಕ್ಕಳಿಗೂ ಗಣೇಶ ಅಂದರೆ ಹೀಗಿರುತ್ತಾನೆ ಎಂಬ ಕಲ್ಪನೆ ಬರುತ್ತದೆ.

ಆದರೆ ಪುರಾಣ ಕಾಲದ ಇಂತಹ ಗಣಪನನ್ನು ಅಳಿಸಿ ಆಧುನಿಕ ಕಾಲದ, ವಿಚಿತ್ರವಾದ ಗಣಪನನ್ನು ತಯಾರಿಸುವುದು ಸರಿಯಲ್ಲ. ಜೊತೆಗೆ ಪರಿಸರ ಕಾಳಜಿ ವಹಿಸಿ, ಬಣ್ಣರಹಿತ ಮಣ್ಣಿನ ಗಣಪನ ಮೂರ್ತಿಗೆ ಪ್ರಾಶಸ್ತ್ಯ ನೀಡಬೇಕು. ಪ್ರತಿಯೊಂದು ಏರಿಯಾದಲ್ಲೂ ವಿವಿಧೆಡೆ ಗಣೇಶ ನನ್ನು ಕೂರಿಸಿ ಅನಗತ್ಯ ಖರ್ಚು ಮಾಡದೆ, ಏರಿಯಾಗೆ ಒಂದೇ ಗಣಪನಿರಲಿ. ಬಡ ವಿದ್ಯಾರ್ಥಿಗಳಿಗೆ ಸಹಾಯ, ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ಪ್ರತಿಭಾವಂತರಿಗೆ ಅವಕಾಶ ನೀಡುವಂತಾಗಲಿ. ಇದನ್ನೇ ವೇದಿಕೆಯಾಗಿಸಿಕೊಂಡು, ಆಯಾ ಏರಿಯಾದ ಸಮಸ್ಯೆಗಳನ್ನು ಬಗೆಹರಿಸಲು ಆದ್ಯತೆ ನೀಡಬೇಕು. ತಮ್ಮ ಕಾರ್ಯಕ್ರಮದಿಂದ ಸಾರ್ವಜನಿಕರ ಸುಗಮ ಸಂಚಾರಕ್ಕೆ ತೊಂದರೆಯಾಗದಂತೆ ಕಾಳಜಿ ವಹಿಸಿ, ಧ್ವನಿವರ್ಧಕಗಳು ಕಿವಿಗಡಚಿಕ್ಕದಂತೆ ನೋಡಿಕೊಂಡರೆ ಗಣೇಶನ ಹಬ್ಬಕ್ಕೆ ಅರ್ಥ ಬರುತ್ತದೆ.‌

ಎಂ.ಎಸ್.ಉಷಾ ಪ್ರಕಾಶ್, ಮೈಸೂರು

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು