ಶುಕ್ರವಾರ, ಡಿಸೆಂಬರ್ 9, 2022
21 °C

ಡಿಜಿಟಲ್ ಲಾಕ್‍ಡೌನ್: ಮಾದರಿ ನಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಕಾಡೇಗಾಂವ್ ತಾಲ್ಲೂಕಿನ ಮೋಹಿತೆ ವಡಗಾಂವದ ಗ್ರಾಮಸ್ಥರು ತಮ್ಮ ಮಕ್ಕಳನ್ನು ಮೊಬೈಲ್ ಗೀಳಿನಿಂದ ಹೊರತಂದು ಓದುವಂತೆ ಮಾಡಲು ನಿತ್ಯ ಸಂಜೆ 7ರಿಂದ ರಾತ್ರಿ 8.30ರವರೆಗೆ ಇಡೀ ಹಳ್ಳಿಯಲ್ಲಿ ‘ಡಿಜಿಟಲ್ ಲಾಕ್‍ಡೌನ್’ ಮಾಡಿರುವುದು (ಪ್ರ.ವಾ., ಅ. 7) ವರದಿಯಾಗಿದೆ. ಕೋವಿಡ್ ಲಾಕ್‍ಡೌನಿನ ತರುವಾಯ ಅಂದು ಮಕ್ಕಳಿಗೆ ಶಿಕ್ಷಣ ನೀಡಲು ಆನ್‍ಲೈನ್ ತರಗತಿಗಳನ್ನು ನಡೆಸಲಾಯಿತು. ಇದರ ಪರಿಣಾಮವಾಗಿ ಮಕ್ಕಳು ಹೆಚ್ಚಿನ ರೀತಿಯಲ್ಲಿ ಮೊಬೈಲ್ ಬಳಕೆ ಮಾಡಿದ್ದರಿಂದ ಹಲವುದುಷ್ಪರಿಣಾಮಗಳನ್ನು ಇಂದು ಎದುರಿಸಬೇಕಾಗಿದೆ.

ಭೌತಿಕ ತರಗತಿಗಳು ಪ್ರಾರಂಭವಾದರೂ ಮಕ್ಕಳು ಮೊಬೈಲ್ ಗೀಳಿನಿಂದ ಹೊರಬಂದಿಲ್ಲ. ಅವರನ್ನು ಡಿಜಿಟಲ್ ಮಾಧ್ಯಮಗಳಿಂದ ವಿಮುಖರನ್ನಾಗಿ ಮಾಡಲು ಹಳ್ಳಿಯವರ ತೀರ್ಮಾನವು ಮಾದರಿ ಮತ್ತು ಅನುಕರಣೀಯವಾಗಿದೆ. ಇದು ವಿದ್ಯಾರ್ಥಿಗಳಿಗಷ್ಟೇ ಸೀಮಿತವಾಗದೆ, ಗುರುವರ್ಗದವರು ಮತ್ತು ಪೋಷಕರಿಗೂ ವಿಸ್ತರಣೆಯಾಗಲಿ. ಏಕೆಂದರೆ ಇಂದು ಚಿಕ್ಕವರು ದೊಡ್ಡವರಾದಿಯಾಗಿ ಎಲ್ಲರೂ ಮೊಬೈಲ್ ಎಂಬ ಮಾಯೆಯ ವಶವರ್ತಿಯಾಗಿದ್ದಾರೆ. ಇದರಿಂದ ಹೊರಬರಲು ವಡಗಾಂವದ ಅನುಕರಣೀಯ ನಡೆಯು ಹಳ್ಳಿ ಮತ್ತು ಪಟ್ಟಣಗಳಲ್ಲಿ ಅನುಷ್ಠಾನಗೊಳ್ಳಲಿ.

ಡಾ. ರುದ್ರೇಶ್ ಅದರಂಗಿ, ಬೆಂಗಳೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.