ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಭರವಸೆ ಕೊಟ್ಟ ಮಾಹಿತಿ

Last Updated 7 ಜನವರಿ 2021, 17:15 IST
ಅಕ್ಷರ ಗಾತ್ರ

ಡಿಜಿಟಲ್ ಪಾವತಿ ವಿಫಲವಾದಾಗ ಗ್ರಾಹಕರು ಅನುಭವಿಸುವ ಕಿರಿಕಿರಿ ಮತ್ತು ಪರಿಹಾರಕ್ಕಿರುವ ಮಾರ್ಗೋಪಾಯಗಳನ್ನು ಕುರಿತ ವಿಶೇಷ ಲೇಖನ (ಪ್ರ.ವಾ., ಜ. 5) ಮಾಹಿತಿಪೂರ್ಣವಾಗಿತ್ತು. ಬ್ಯಾಂಕ್‌ ಖಾತೆಯಲ್ಲಿ ಕಡಿಮೆ ಹಣ ಇದ್ದಾಗ ಡಿಜಿಟಲ್ ಪಾವತಿ ವಿಫಲವಾಗಿ ಒಮ್ಮೆ ನನಗಾದ ಅನುಭವ ಮತ್ತು ಆತಂಕ ಆ ದೇವರಿಗೇ ಪ್ರೀತಿ! ಅಂದು ನನ್ನ ಸ್ನೇಹಿತ ನಾನು ತಲುಪಬೇಕಿದ್ದ ಜಾಗಕ್ಕೆ ತನ್ನ ಬೈಕ್‌ನಲ್ಲಿ ನನ್ನನ್ನು ತಲುಪಿಸಿ ನೆರವಾಗದಿದ್ದಲ್ಲಿ ನಾನು ಪಾದಯಾತ್ರೆ ಮಾಡಬೇಕಾಗುತ್ತಿತ್ತು. ಅಂದಿನಿಂದ ನಾನು ಹೆಚ್ಚಾಗಿ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಬಲವಾಗಿ ಆಧರಿಸುತ್ತಿಲ್ಲ.

ವಿಫಲ ವಹಿವಾಟಿನ ನಂತರ ನಮ್ಮ ಖಾತೆಗೆ ಹಣ ಮರಳಿಸಲು ಕಾಲಮಿತಿಯ ಜೊತೆಗೆ ದಿನಕ್ಕೆ ನೂರು ರೂಪಾಯಿಯ ಪರಿಹಾರ ಸಿಗುವಂತೆ ಆರ್‌ಬಿಐ ವ್ಯವಸ್ಥೆ ಕಲ್ಪಿಸಿರುವುದರ ಬಗ್ಗೆ ಮಾಹಿತಿಯೇ ಇರಲಿಲ್ಲ. ಒಟ್ಟಿನಲ್ಲಿ ಲೇಖನವು ಡಿಜಿಟಲ್‌ ವಹಿವಾಟು ನಡೆಸುವ ನನ್ನಂತಹವರಿಗೆ ಧೈರ್ಯ ಮತ್ತು ಭರವಸೆ ಕೊಟ್ಟಿದೆ.

–ನಾಗರಾಜ ವಿ. ವಿಭೂತಿ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT