ಬುಧವಾರ, ಆಗಸ್ಟ್ 17, 2022
29 °C

ವಾಚಕರ ವಾಣಿ: ಶಾಲೆಯ ಹಿರಿಮೆ ಹೆಚ್ಚಿಸಿದ ನಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ದೇವಗಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಕೃಷಿಯನ್ನು ಒಂದು ಪಠ್ಯವಾಗಿ ಸ್ವೀಕರಿಸಿ ಮಾದರಿಯಾಗಿರುವುದು (ಪ್ರ.ವಾ., ಡಿ. 1) ಅತ್ಯಂತ ಶ್ಲಾಘನೀಯ. ಕೊರೊನಾ ಕಾರಣದಿಂದ ಎಂಟು ತಿಂಗಳಿಂದ ಶಾಲಾ ಕಾಲೇಜು ಬಂದ್ ಆಗಿವೆ. ಈ ನಡುವೆ ಎಷ್ಟೋ ಶಿಕ್ಷಕರು ಮಕ್ಕಳಿದ್ದಲ್ಲಿಗೇ ಹೋಗಿ ಪಾಠ ಮಾಡಿ ವೃತ್ತಿಧರ್ಮವನ್ನು ಪಾಲಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅದೇ ರೀತಿ, ದೇವಗಳ್ಳಿ ಸರ್ಕಾರಿ ಶಾಲೆಯ ಮಕ್ಕಳು ಕೊರೊನಾ ರಜಾ ದಿನಗಳಲ್ಲಿ ಶಾಲಾ ಆವರಣದ 20 ಗುಂಟೆ ಜಮೀನಿನಲ್ಲಿ ಭತ್ತ, ರಾಗಿ ಮತ್ತು ಸಾವಯವ ತರಕಾರಿಗಳನ್ನು ಬೆಳೆಯುವುದರ ಮೂಲಕ ಶಾಲೆಯ ಹಿರಿಮೆಯನ್ನು ಹೆಚ್ಚಿಸಿದ್ದಾರೆ.

ಸರ್ಕಾರಿ ಶಾಲೆಗಳ ಅಳಿವು ಉಳಿವಿನ ಹೋರಾಟದ ಈ ದಿನಗಳಲ್ಲಿ ವಿದ್ಯಾರ್ಥಿಗಳ ಕೃಷಿ ಪೋಷಣೆಯ ಚಟುವಟಿಕೆ ವಿಭಿನ್ನವಾಗಿದೆ. ಉಳಿದ ಶಾಲೆಗಳೂ ಇಂತಹ ಮಾದರಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಂತೆ ಮಾಡಲು ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಬೇಕು. ಶಾಲಾ ಆವರಣ ಮತ್ತು ಶಾಲೆಯಲ್ಲಿರುವ ನೀರಿನ ಸದ್ಬಳಕೆ ಬಗ್ಗೆ ಅರಿವು ಮೂಡಿಸುವ ಮೂಲಕ ವಿದ್ಯಾರ್ಥಿಗಳಲ್ಲಿರುವ ಕೃಷಿ ಜ್ಞಾನಕ್ಕೆ ಸೂಕ್ತ ವೇದಿಕೆ ಕಲ್ಪಿಸಿಕೊಡಬೇಕು.

ಮಾರುತೇಶ್ ಕವಿ ಪುಲಮಘಟ್ಟ, ಮಧುಗಿರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು