ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ರಸಗೊಬ್ಬರ ಸಮಸ್ಯೆ ನಿವಾರಿಸಿ

Last Updated 13 ಆಗಸ್ಟ್ 2020, 19:30 IST
ಅಕ್ಷರ ಗಾತ್ರ

ಹಳೆ ಮೈಸೂರು ಭಾಗದಲ್ಲಿ ರೈತರಿಗೆ ರಸಗೊಬ್ಬರದ ಸಮಸ್ಯೆ ಉಂಟಾಗಿದೆ. ತಾಲ್ಲೂಕು, ಹೋಬಳಿ ಹಾಗೂ ಜಿಲ್ಲಾ ಕೇಂದ್ರದ ದಾಸ್ತಾನು ಮಳಿಗೆಗಳಲ್ಲಿ ರಸಗೊಬ್ಬರದ ಕೊರತೆ ಇದೆ. ಕೆಲವು ಭಾಗಗಳಲ್ಲಿ ರಸಗೊಬ್ಬರವೇ ಸಿಗುತ್ತಿಲ್ಲ. ಹಾಗಾಗಿ ರೈತರು ಕಂಗಾಲಾಗುವ ಪರಿಸ್ಥಿತಿ ಇದ್ದು, ರಸಗೊಬ್ಬರ ಪೂರೈಕೆಗೆ ಕೂಡಲೇ ಕ್ರಮ ಕೈಗೊಳ್ಳಬೇಕು.

ಲಕ್ಷ್ಮಿ ಕಿಶೋರ್ ಅರಸ್ ಕೂಡ್ಲೂರು, ಚನ್ನಪಟ್ಟಣ ಕಿಡಿಗೇಡಿಗಳ ನಡುವೆ ಸೌಹಾರ್ದ ಕಾಯ್ದವರು ಬೆಂಗಳೂರಿನ ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಹಾಗೂ ಕಾವಲ್‌ ಭೈರಸಂದ್ರ ಪ್ರದೇಶದಲ್ಲಿ ಕಿಡಿಗೇಡಿಗಳು ನಡೆಸಿದ ಕೃತ್ಯ ಖಂಡನೀಯ. ಈ ಕೃತ್ಯಕ್ಕೆ ಪ್ರಚೋದನೆ ನೀಡಿದ ಪ್ರಬಲ ಶಕ್ತಿಗಳನ್ನು ಶಿಕ್ಷಿಸಿ, ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕಾದುದು ಎಲ್ಲರ ಕರ್ತವ್ಯ.

ಈ ಪುಂಡಾಟಿಕೆಯ ನಡುವೆಯೂ ಮುಸ್ಲಿಂ ಯುವಕರು ಹಿಂದೂಗಳ ದೇವಾಲಯವನ್ನು ರಕ್ಷಿಸಿರುವುದು ಶ್ಲಾಘನೀಯ. ಇಂತಹ ಕೋಮು ಸೌಹಾರ್ದವನ್ನು ಕಾಪಾಡಿದ ಮತ್ತೊಂದು ಘಟನೆ ಹೈದರಾಬಾದ್ ಪ್ರಾಂತ್ಯದಲ್ಲಿ ನಡೆದದ್ದು ನೆನಪಿಗೆ ಬರುತ್ತದೆ. ಭಾರತಕ್ಕೆ ಸ್ವಾತಂತ್ರ್ಯ ಬಂದ ಮೇಲೆ ಹೈದರಾಬಾದ್ ಸಂಸ್ಥಾನವು ಭಾರತದ ಒಕ್ಕೂಟದಲ್ಲಿ ಸೇರಲು ರಜಾಕಾರ್ ಸ್ವಯಂ ಸೇವಕರು ವಿರೋಧಿಸಿದರು. ಆ ಸಮಯದಲ್ಲಿ ಈ ರಜಾಕಾರರು ಹಿಂದೂಗಳ ಮೇಲೆ ದೌರ್ಜನ್ಯವೆಸಗಿದರು. ಆ ಸಮಯದಲ್ಲಿ ಹಿಂದೂಗಳನ್ನು ರಜಾಕಾರರ ದೌರ್ಜನ್ಯದಿಂದ ಮುಸ್ಲಿಮರು ರಕ್ಷಿಸಿದರು. ನಿಜಾಮರ ಕಾಲದಿಂದಲೂ ಹಿಂದೂ– ಮುಸ್ಲಿಮರ ಭಾವೈಕ್ಯ ಆದರ್ಶವಾಗಿದೆ.

-ಪ್ರೊ. ಶಾಶ್ವತಸ್ವಾಮಿ ಮುಕ್ಕುಂದಿಮಠ, ಸಿಂಧನೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT