ಭಾನುವಾರ, ಜೂನ್ 26, 2022
21 °C

ವಾಚಕರ ವಾಣಿ: ಸುಂದರ ಪರಿಸರಕ್ಕೆ ದಾರಿ ತೋರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೀನಾ, ಜಪಾನ್, ಜರ್ಮನಿ, ಅಮೆರಿಕದಂತಹ ದೇಶಗಳು ಮಕ್ಕಳಿಗೆ ನಿರಂತರವಾಗಿ ಪರಿಸರ ಪಾಠ ಮಾಡುತ್ತಿವೆ. ನಮ್ಮ ರಾಜ್ಯದಲ್ಲಿ ಒಂದರಿಂದ ಹತ್ತನೇ ತರಗತಿವರೆಗೆ ಕೇವಲ ಶೇ 4ರಷ್ಟು ಪರಿಸರ ಪಾಠ ಇದೆ. ಇನ್ನುಳಿದ ಶೇ 96ರಷ್ಟು ಬೇರೆ ವಿಷಯಗಳ ಪಾಠ ಇರುವುದರಿಂದ ಮಕ್ಕಳಿಗೆ ಪರಿಸರದ ಸಂಪೂರ್ಣ ಜ್ಞಾನ ಇಲ್ಲದಂತಾಗಿದೆ. ಬೆಂಗಳೂರಿನ ಕೃಷಿ ತಂತ್ರಜ್ಞರ ಸಂಸ್ಥೆಯು ಕೃಷಿ, ಪರಿಸರ ಪಾಠಗಳನ್ನೂ ಶಾಲೆಯ ಪಠ್ಯಕ್ರಮದಲ್ಲಿ ಸೇರಿಸಬೇಕೆಂದು ಒತ್ತಾಯಿಸಿ ಡಿಎಸ್‌ಇಆರ್‌ಟಿ, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ಮನವಿ ಸಲ್ಲಿಸಿದೆ.

ಆಹಾರ, ರೈತ, ಮರ ಬೆಳೆಸುವುದು, ಅರಣ್ಯ, ಜಲಸಾಕ್ಷರತೆ, ಮಳೆ ಪ್ರಮಾಣ ಅಳೆಯುವುದು, ನೀರು ಆವಿ ಪ್ರಮಾಣ, ತಾರಸಿ ಮಳೆನೀರು, ಕೃಷಿ ಹೊಂಡ, ಕೆರೆ, ನದಿಮಾಲಿನ್ಯ, ಮಣ್ಣು ಸಂರಕ್ಷಣೆ, ಕಸ ನಿರ್ವಹಣೆ, ಗೊಬ್ಬರ ತಯಾರಿಕೆ, ಬಿತ್ತನೆ ಬೀಜ, ಪವನಶಕ್ತಿ, ಸೌರಶಕ್ತಿ, ಜೈವಿಕ ಇಂಧನ, ವಾಯುಮಾಲಿನ್ಯ, ಹಸಿರುಮನೆ, ಜಾಗತಿಕ ತಾಪಮಾನ, ಪ್ರಾಣಿ, ಪಕ್ಷಿ, ಪಂಜಾಬ್ ಕ್ಯಾನ್ಸರ್ ರೈಲು, ವಿಯೆಟ್ನಾಂ ಕಳೆನಾಶಕ ದುರಂತ, ಭೋಪಾಲ್ ವಿಷಾನಿಲ ದುರಂತ, ಬಂಗಾಳ ಬರದಂತಹ ಸಂಗತಿಗಳನ್ನು ಪಠ್ಯಕ್ರಮದಲ್ಲಿ ಸೇರಿಸಿ, ಶಾಲಾ ಮಕ್ಕಳಿಗೆ ಜ್ಞಾನ ನೀಡಿ, ಸುಂದರ ಪರಿಸರಕ್ಕೆ ದಾರಿ ತೋರಬೇಕಾಗಿದೆ.

–ಎಚ್.ಆರ್.ಪ್ರಕಾಶ್, ಮಂಡ್ಯ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು