ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದಲಾಗಲಿ ಉತ್ತರ ಪತ್ರಿಕೆಯ ಸ್ವರೂಪ

Last Updated 17 ಏಪ್ರಿಲ್ 2022, 20:30 IST
ಅಕ್ಷರ ಗಾತ್ರ

ಲಿಖಿತ ಪರೀಕ್ಷೆಗಳಲ್ಲಿ ಬಳಸಲಾಗುವ ಉತ್ತರ ಪತ್ರಿಕೆಗಳ ಮೂಲ ಸ್ವರೂಪ ಸಾಮಾನ್ಯವಾಗಿ ಒಂದೇ ರೀತಿ ಇರುತ್ತದೆ. ಮುಖಪುಟದಲ್ಲಿ ಪರೀಕ್ಷೆಗೆ ಸಂಬಂಧಿಸಿದಂತೆ ಎಲ್ಲ ವಿವರಗಳು ಇರುತ್ತವೆ. ಜೊತೆಗೆ ಅದೇ ಪುಟದಲ್ಲಿ ಪ್ರತೀ ಪ್ರಶ್ನೆಗೆ ಪಡೆದ ಅಂಕಗಳನ್ನು ಅನುಕ್ರಮವಾಗಿ ನಮೂದಿಸಲು ಅನುಕೂಲವಾಗುವಂತೆ ಚೌಕಗಳನ್ನು ಮಾಡಿರುತ್ತಾರೆ. ಉತ್ತರ ಪತ್ರಿಕೆಯ ಪ್ರತೀ ಪುಟದಲ್ಲಿಂದ ಪಡೆದ ಅಂಕಗಳನ್ನು ಈ ಮುಖಪುಟದಲ್ಲಿ ನಮೂದಿಸುವುದು ಅನನುಕೂಲಕರವಾಗಿದೆ. ಪ್ರತೀ ಸಲ ಪುಟಗಳನ್ನು ತಿರುವಿ ತಿರುವಿ ಬರೆಯುವುದರಿಂದ ಸಮಯ ವ್ಯರ್ಥವಾಗುತ್ತದೆ. ಇದರ ಬದಲಿಗೆ ಉತ್ತರ ಪತ್ರಿಕೆಯ ಮುಖಪುಟದ ವಿನ್ಯಾಸವನ್ನು ಬದಲಿಸುವುದು ಸೂಕ್ತ.

ಮುಖಪುಟದ ಅಳತೆಯನ್ನು ಅರ್ಧದಷ್ಟು ಹೆಚ್ಚಿಸಬೇಕು. ಈ ಹೆಚ್ಚುವರಿ ಹಾಳೆಯ ಒಳಭಾಗದಲ್ಲಿ ಪ್ರತೀ ಪುಟದಲ್ಲಿ ಪಡೆದ ಅಂಕಗಳನ್ನು ನಮೂದಿಸುವಂತೆ ಆಗಬೇಕು. ಹೆಚ್ಚುವರಿ ಹಾಳೆಯನ್ನು ಒಳಭಾಗದಲ್ಲಿ ಮಡಿಸಬೇಕು. ಮೌಲ್ಯಮಾಪಕರಿಗೆ ಅನುಕೂಲವಾಗುವಂತೆ ಉತ್ತರ ಪತ್ರಿಕೆಗಳನ್ನು ಮುದ್ರಿಸುವುದರಿಂದ ಮೌಲ್ಯಮಾಪನ ಕಾರ್ಯ ಬಹಳ ವೇಗವಾಗಿ ಆಗಲು ಸಾಧ್ಯವಾಗುತ್ತದೆ. -ಎಸ್‌.ಆರ್‌.ಬಿರಾದಾರ್‌,ವಿಜಯಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT