ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ಎಥೆನಾಲ್‌: ಹೂಡಿಕೆಗೆ ಮುನ್ನ...

Last Updated 7 ನವೆಂಬರ್ 2022, 19:31 IST
ಅಕ್ಷರ ಗಾತ್ರ

ಎಥೆನಾಲ್ ಉತ್ಪಾದನಾ ಕ್ಷೇತ್ರದಲ್ಲಿ ಹೆಚ್ಚಿನ ಬಂಡವಾಳ ಹೂಡಿಕೆಗೆ ಉದ್ಯಮಿಗಳು ಮುಂದೆ ಬರಬೇಕು ಎಂದು ಎಂ.ಆರ್.ಎನ್. ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ವಿಜಯ್ ಎಂ.ನಿರಾಣಿ ಅವರು ಜಾಗತಿಕ ಹೂಡಿಕೆ ದಾರರ ಸಮಾವೇಶದಲ್ಲಿ ಕರೆ ನೀಡಿರುವುದು ಸರಿಯಾಗಿದೆ. ಆದರೆ ಎಥೆನಾಲ್‌ ಅನ್ನು ಉತ್ಪಾದಿಸುವ ಕಬ್ಬಿನ ಬೆಳೆಗೆ ಸರ್ಕಾರ ಮೊದಲು ವೈಜ್ಞಾನಿಕ ಬೆಲೆ ನಿಗದಿಪಡಿಸಬೇಕಿದೆ. ಅಷ್ಟೇ ಅಲ್ಲ, ಸಮಯಕ್ಕೆ ಸರಿಯಾಗಿ ಗುಣಮಟ್ಟದ ರಾಸಾಯನಿಕ ಗೊಬ್ಬರಗಳನ್ನು ಸಬ್ಸಿಡಿ ದರದಲ್ಲಿ ಪೂರೈಸಲು ಹಾಗೂ ಕಟಾವಿನ ನಂತರ ಕಬ್ಬು ಸಾಗಣೆಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಮುಂದಾಗಬೇಕಿದೆ. ಹವಾಮಾನ ವೈಪರೀತ್ಯ, ಕೃಷಿ ಕ್ಷೇತ್ರದಲ್ಲಿನ ನಷ್ಟ ಸೇರಿದಂತೆ ಅನೇಕ ಕಾರಣ ಗಳಿಂದಾಗಿ ರೈತರಲ್ಲಿ ಕೃಷಿ ಬಗೆಗಿನ ಆಸಕ್ತಿಯೇ ಕುಂದಿದೆ. ಇಂಥ ಸಂದರ್ಭದಲ್ಲಿ ಸರ್ಕಾರವು ಮೂಲಕ್ಷೇತ್ರವನ್ನು ಸುಧಾರಿಸಿ ಬಳಿಕ ಹಸಿರು ಇಂಧನದ ಹೂಡಿಕೆಗಳತ್ತ ಗಮನ ಹರಿಸಲಿ.

-ಶ್ರೀನಿವಾಸ್ ಚಕ್ರವರ್ತಿ, ಹೊಳಲು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT