ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ದೇಶ ರೂಪಿಸಿದ ಪಟೇಲ್‌

Last Updated 10 ಜನವರಿ 2023, 19:30 IST
ಅಕ್ಷರ ಗಾತ್ರ

ವಲ್ಲಭ ಭಾಯಿ ಪಟೇಲರೇ ಗಡಿ ಸಮಸ್ಯೆಗೆ ಮೂಲ ಕಾರಣ ಎಂದು 86ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ದೊಡ್ಡರಂಗೇಗೌಡ ಅವರು ಹೇಳಿರುವುದು ಆಶ್ಚರ್ಯಕರ. ಪಟೇಲರು ನಿಧನ ಹೊಂದಿದ್ದು 1950ರಲ್ಲಿ. ಮೈಸೂರು ಅಥವಾ ಕರ್ನಾಟಕ ರಾಜ್ಯ ಈಗಿರುವಂತೆ ಅಸ್ತಿತ್ವಕ್ಕೆ ಬಂದದ್ದು 1956ರಲ್ಲಿ. ರಾಜ್ಯಗಳು ಪುನರ್ವಿಂಗಡಣೆ ಆದ ಬಳಿಕ ಮತ್ತು ಕೇಂದ್ರ ಸರ್ಕಾರದ ಕಾನೂನಿನಂತೆ, ಸುತ್ತಲಿನ ರಾಜ್ಯಗಳಲ್ಲಿ ಹರಿದು ಹಂಚಿಹೋಗಿದ್ದ ಕನ್ನಡದ ಪ್ರದೇಶಗಳು ಒಂದು ಕಡೆ ಸೇರಿದವು. ನಿಜ, ಕೆಲವು ಪ್ರದೇಶಗಳು ಇನ್ನೂ ಸೇರಬೇಕಿದೆ. ಆದರೆ ಅದು ಆನಂತರ ಉಂಟಾಗಿರುವ ಸಮಸ್ಯೆ. ವಸ್ತುಸ್ಥಿತಿ ಹೀಗಿರುವಾಗ, ಗಡಿ ಸಮಸ್ಯೆಯನ್ನು ಪಟೇಲರಿಗೆ ಆರೋಪಿಸುವುದು ದುರದೃಷ್ಟಕರ.

ಪಟೇಲರು ರಾಷ್ಟ್ರಕ್ಕೆ ಸಲ್ಲಿಸಿರುವ ಸೇವೆ ಎಲ್ಲರಿಗೂ ಗೊತ್ತಿರುವಂತಹದ್ದು. 560ಕ್ಕೂ ಹೆಚ್ಚು ಸ್ಥಳೀಯ ಪ್ರಾಂತ್ಯಗಳನ್ನು ಹಲವಾರು ಕ್ರಮಗಳ ಮೂಲಕ ಒಂದುಗೂಡಿಸಿ, ದೇಶ ಈಗಿರುವಂತೆ ರೂಪುಗೊಳ್ಳುವಲ್ಲಿ ಅವರ ಪಾತ್ರ ಬಹಳ ಹಿರಿದು. ಹೀಗಿರುವಾಗ ಅವರಿಗೆ ಅವಹೇಳನವಾಗುವಂತೆ ಮಾತನಾಡಿರುವುದು ಉಚಿತವಲ್ಲ ಹಾಗೂ ಸಂದರ್ಭೋಚಿತವೂ ಅಲ್ಲ.

–ವೆಂಕಟೇಶ ಮಾಚಕನೂರ, ಧಾರವಾಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT