ಸೋಮವಾರ, ನವೆಂಬರ್ 18, 2019
25 °C

ವಿದ್ಯಾರ್ಥಿಗಳ ಅಭಿಪ್ರಾಯಕ್ಕೆ ಆಸ್ಪದವಿಲ್ಲ

Published:
Updated:

ಹಾವೇರಿಯ ಪಿಯು ಕಾಲೇಜೊಂದರಲ್ಲಿ ವಿದ್ಯಾರ್ಥಿಗಳ ತಲೆಗೆ ಡಬ್ಬ ತೊಡಿಸಿ ಪರೀಕ್ಷೆ ಬರೆಸಲಾಗಿದೆ (ಪ್ರ.ವಾ., ಅ.19). ಇದನ್ನು ಶಿಕ್ಷಣ ಇಲಾಖೆಯೇ ತೀವ್ರವಾಗಿ ಖಂಡಿಸಿರುವುದು ಖುಷಿಯ ವಿಚಾರವಾದರೆ, ವಿದ್ಯಾರ್ಥಿಗಳಿಗೆ ಬಂದೊದಗಿದ ದುಃಸ್ಥಿತಿ ಕಂಡು ಬೇಸರವಾಯಿತು. ಆಕ್ಷೇಪವಿಲ್ಲದಿದ್ದರೆ ಈ ವಿಧಾನವನ್ನು ಅಳವಡಿಸಲು ನಮ್ಮಲ್ಲಿ ಬಹಳಷ್ಟು ಮಂದಿ ತಯಾರಿರಬಹುದು. ವಿದ್ಯಾರ್ಥಿಗಳ ಅಭಿಪ್ರಾಯಕ್ಕೆ ಯಾವುದೇ ಆಸ್ಪದವಿಲ್ಲದೆ ಅವರನ್ನು ಕುರಿಗಳಂತೆ ನಡೆಸಿಕೊಳ್ಳುವುದು ಸಾಮಾನ್ಯವಾಗಿದೆ. ನಕಲು ಮಾಡುವ ಮನಃಸ್ಥಿತಿಯೇ ಬಾರದಂತೆ ನೋಡಿಕೊಳ್ಳುವುದು ಶಾಲೆ-ಕಾಲೇಜುಗಳ ಜವಾಬ್ದಾರಿಯೇ ಹೊರತು ಇಂತಹ ವಿಧಾನಗಳಿಂದ ಏನೂ ಲಾಭವಿಲ್ಲ.

ಪ್ರತಿಕ್ರಿಯಿಸಿ (+)