ಸೋಮವಾರ, ಜೂನ್ 27, 2022
21 °C

ವಾಚಕರ ವಾಣಿ: ವರ್ಗಾವಣೆ ಅಸ್ತ್ರ ಬಳಕೆ ಸಲ್ಲದು

ವಾಚಕರ ವಾಣಿ Updated:

ಅಕ್ಷರ ಗಾತ್ರ : | |

ಮೈಸೂರಿನಲ್ಲಿದ್ದ ಇಬ್ಬರು ಐಎಎಸ್ ಅಧಿಕಾರಿಗಳ ಇತ್ತೀಚಿನ ವರ್ಗಾವಣೆ ನಂತರ ರಾಜಕಾರಣಿಗಳು ಮತ್ತು ಆಡಳಿತಾಧಿಕಾರಿಗಳ ಮಧ್ಯೆ ಕೆಸರೆರಚಾಟ ಪ್ರಾರಂಭವಾಗಿದೆ. ಶಾಸಕ ಸಾ.ರಾ.ಮಹೇಶ್ ಅವರು ರೋಹಿಣಿ ಸಿಂಧೂರಿ ಅವರನ್ನು ಮಾಡೆಲ್ ಎಂದಿರುವುದು, ತಮ್ಮ ಪತ್ನಿ ಹೆಸರಿನಲ್ಲಿರುವ ಚೌಲ್ಟ್ರಿಯು ರಾಜಕಾಲುವೆ ಪಕ್ಕ ಇರುವುದು ಸಾಬೀತಾದರೆ ರಾಜಕೀಯ ನಿವೃತ್ತಿ ಪಡೆಯುವುದಾಗಿ, ಇಲ್ಲವಾದರೆ ಸಿಂಧೂರಿಯವರು ಕೆಲಸಕ್ಕೆ ರಾಜೀನಾಮೆ ನೀಡಿ ಅಡುಗೆ ಮಾಡಿಕೊಂಡಿರಲಿ (ಪ್ರ.ವಾ., ಜೂನ್‌ 10) ಎಂದು ಹೇಳಿರುವುದು ಸರಿಯಲ್ಲ. ಹೆಣ್ಣು ಅಡುಗೆ ಮನೆಗೆ ಸೀಮಿತವಾದರೆ ಒಳ್ಳೆಯದು ಎಂಬಂತಿದೆ ಇವರ ಮಾತಿನ ಅರ್ಥ. ಇದುವರೆಗೂ ಯಾವೊಬ್ಬ ರಾಜಕಾರಣಿಯೂ ಬಹಿರಂಗ ಸವಾಲು ಹಾಕಿ ಅದರಂತೆ ನಡೆದುಕೊಂಡಿಲ್ಲ, ರಾಜಕೀಯ ನಿವೃತ್ತಿ ಪಡೆದಿಲ್ಲ. ಅದೇ ಕೆಲವು ನಿಷ್ಠಾವಂತ ಅಧಿಕಾರಿಗಳು ವ್ಯವಸ್ಥೆಗೆ ಬೇಸತ್ತು ತಮ್ಮ ಜೀವ ಹಾಗೂ ಹುದ್ದೆ ಎರಡನ್ನೂ ಬಿಟ್ಟ ಉದಾಹರಣೆಗಳಿವೆ. ಅಧಿಕಾರಿಗಳಿಗೆ ತಮ್ಮ ವ್ಯಾಪ್ತಿಯಲ್ಲಿ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಬಿಡದೆ, ವರ್ಗಾವಣೆ ಎಂಬ ಅಸ್ತ್ರದ ಮೂಲಕ ಅವರ ಮನೋಸ್ಥೈರ್ಯ ಕುಗ್ಗಿಸಲು ಮುಂದಾಗುವುದು ಸರಿಯಲ್ಲ.

–ಶ್ವೇತಾ ಎನ್. ಸೊರಬ, ಶಿವಮೊಗ್ಗ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು