ಬುಧವಾರ, ಆಗಸ್ಟ್ 10, 2022
21 °C

ಜ್ಞಾನ ದೇಗುಲದಲ್ಲಿ ಅಸಮರ್ಪಕ ಯೋಜನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿ ಸಿಬಿಎಸ್‌ಇ ದಕ್ಷಿಣ ಕೇಂದ್ರ ಕಚೇರಿ ಹಾಗೂ ಯೋಗ
ವಿಶ್ವವಿದ್ಯಾಲಯ ಪ್ರಾರಂಭಿಸುವ ಪ್ರಸ್ತಾವ ಕುರಿತು ಓದಿ ಆಘಾತವುಂಟಾಯಿತು. ಪರಿಸರ ವಿಜ್ಞಾನಿ ಯಲ್ಲಪ್ಪ ರೆಡ್ಡಿ ಹಾಗೂ ಭೂವಿಜ್ಞಾನಿ ಪ್ರೊ. ರೇಣುಕಾ ಪ್ರಸಾದ್ ಅವರ ನೇತೃತ್ವದಲ್ಲಿ ಈ ಆವರಣದಲ್ಲಿ 25 ವರ್ಷಗಳ ಹಿಂದೆ ಮುತುವರ್ಜಿ ವಹಿಸಿ ನೆಟ್ಟು, ಪೋಷಿಸಿದ್ದ ಗಿಡಗಳು ಇಂದು ವೃಕ್ಷಗಳಾಗಿ ಪಕ್ಷಿಸಂಕುಲಕ್ಕೆ ಆಶ್ರಯ ಕೊಟ್ಟಿವೆ. ಇಂತಹ ಆವರಣದಲ್ಲಿ ಕಾಂಕ್ರೀಟ್ ಕಟ್ಟಡ ನಿರ್ಮಾಣ ಮಾಡಲು ಹೊರಟಿರುವುದು ದುರ್ದೈವದ ಸಂಗತಿ.‌

ಇದರ ಹಿಂದೆ ಪಟ್ಟಭದ್ರ ಹಿತಾಸಕ್ತಿಗಳ ಪಾತ್ರ ಎದ್ದು ಕಾಣುತ್ತಿದೆ. ಆ ಆವರಣದಲ್ಲಿ ಪ್ರಸ್ತುತ ಯೋಜನೆಯನ್ನು ಕಾರ್ಯರೂಪಕ್ಕೆ ತಂದದ್ದೇ ಆದರೆ ಸಹಸ್ರಾರು ವೃಕ್ಷಗಳ ಮಾರಣಹೋಮ ನಡೆಯುತ್ತದೆ. ‘ವೃಕ್ಷೋ ರಕ್ಷತಿ ರಕ್ಷಿತಃ’ ಎಂಬ ನಾಣ್ನುಡಿಯಂತೆ ನಾವು ವೃಕ್ಷಗಳನ್ನು ಬೆಳೆಸಿ, ಇಡೀ ಪರಿಸರಕ್ಕೆ ಆಮ್ಲಜನಕ ಕೊಡುವಂತೆ ಮಾಡಿ, ವಿವಿಧ ಪಕ್ಷಿಗಳಿಗೆ ಆಶ್ರಯತಾಣವಾಗುವಂತೆ ನೋಡಿಕೊಳ್ಳಬೇಕಾಗಿದೆ. ಈ ಮೂಲಕ ಸಮಾಜಕ್ಕೆ ಮಾದರಿಯಾಗಬೇಕಾಗಿದೆ. ಹೀಗಾಗಿ, ಪರಿಸರ ವಿರೋಧಿಯಾಗಿರುವ ಪ್ರಸ್ತುತ ಯೋಜನೆಯನ್ನು ಕೂಡಲೇ ಕೈಬಿಡಬೇಕು.

ಡಾ. ಬಿ.ಆರ್.ವೆಂಕಟೇಶ್, ರು.ಲ.ಮಂಜುನಾಥ್, ಬೆಂಗಳೂರು
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು