ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‌ಬೇಲಿಯೇ ಎದ್ದು ಹೊಲ ಮೇಯುವಾಗ...

Last Updated 27 ನವೆಂಬರ್ 2020, 19:49 IST
ಅಕ್ಷರ ಗಾತ್ರ

ಏಷ್ಯಾ ಖಂಡದಲ್ಲಿ ಲಂಚದ ಪಿಡುಗಿನ ಕುರಿತು ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್ ಸಂಸ್ಥೆ ನಡೆಸಿದ ಸಮೀಕ್ಷೆ ತಿಳಿಸಿರುವಂತೆ (ಪ್ರ.ವಾ., ನ. 27), ಭಾರತದಲ್ಲೇ ಲಂಚದ ಪ್ರಮಾಣ ಅಧಿಕವಾಗಿರುವುದು ಅವಮಾನಕರ. ಲಂಚದ ಪಿಡುಗನ್ನು ಹತ್ತಿಕ್ಕಲು ಸರ್ಕಾರ ಸ್ಪಷ್ಟ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಮೀಕ್ಷಾ ವರದಿ ಅಭಿಪ್ರಾಯಪಟ್ಟಿದೆ.

ಆದರೆ ನಮ್ಮ ಸರ್ಕಾರಕ್ಕೆ ಅಂಥ ಮನಸ್ಸು ಇದ್ದಂತೆ ತೋರುವುದಿಲ್ಲ. ಭಾರತದಲ್ಲಿ ಲಂಚವೆಂಬುದು ಪಕ್ಷಭೇದವಿಲ್ಲದ ತೆರೆದ ರಹಸ್ಯವಾಗಿರುವುದಕ್ಕೆ ಕಾಣಸಿಗುವ ಉದಾಹರಣೆಗಳನ್ನು ವಿವರಿಸುವ ಅಗತ್ಯವಿಲ್ಲ. ಬೇಲಿಯೇ ಎದ್ದು ಹೊಲ ಮೇಯುವಾಗ ಕಾಯುವವರು ಯಾರು ಎಂಬ ಜಟಿಲ ಪ್ರಶ್ನೆಯನ್ನು ವರದಿ ಹುಟ್ಟುಹಾಕಿದೆ.
ದಿನಮಣಿ ಬಿ.ಎಸ್., ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT