ಭಾನುವಾರ, ಸೆಪ್ಟೆಂಬರ್ 19, 2021
28 °C

ಬೇಕಾಗಿದೆ ‘ಭಾರತೀಯ ಭಾಷೆ’ಗಳ ದಿನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೇಂದ್ರ ಸರ್ಕಾರವು ಪ್ರತಿವರ್ಷ ಸೆ. 14ರಂದು ಹಿಂದಿ ದಿವಸವನ್ನು ದೇಶದಾದ್ಯಂತ ಆಚರಿಸುತ್ತಾ ಬಂದಿದೆ. ಹಲವು ಭಾಷೆಗಳ ಭಾರತದಲ್ಲಿ ಆಚರಿಸಬೇಕಾಗಿರುವುದು ಭಾರತೀಯ ಭಾಷೆಗಳ ದಿವಸವೇ ಹೊರತು ಹಿಂದಿ ದಿವಸವಲ್ಲ. ನಮಗೆ ಸ್ವಾತಂತ್ರ್ಯ ಬಂದ ನಂತರ ದಶಕದಿಂದ ದಶಕಕ್ಕೆ ಹಿಂದಿ ಹೇರಿಕೆಯ ಬಿಗಿಪಟ್ಟು ಹೆಚ್ಚುತ್ತಾ ಹೋಗುತ್ತಿದೆ. ಇದರಲ್ಲಿ ಎಲ್ಲಾ ಪಕ್ಷಗಳ ಕೊಡುಗೆಯೂ ಇದೆ.

ಇದೇ ಅಕ್ಟೋಬರ್ 10ರಂದು ದೇಶದಾದ್ಯಂತ ನಾಗರಿಕ ಸೇವಾ (ಯುಪಿಎಸ್‌ಸಿ) ಪೂರ್ವಭಾವಿ ಪರೀಕ್ಷೆ ನಡೆಯುತ್ತಿದೆ. ಇಂಗ್ಲಿಷ್ ಜೊತೆಗೆ ಹಿಂದಿ ಮಾಧ್ಯಮದಲ್ಲಿ ಮಾತ್ರ ಇದು ಇರುತ್ತದೆ. ಹಿಂದಿ ಭಾಷಿಕರಿಗೆ ಅವರ ನುಡಿಯಲ್ಲಿಯೇ ಎಲ್ಲಾ ಅನುಕೂಲಗಳನ್ನು ಮಾಡಿಕೊಟ್ಟು ಉಳಿದ ಭಾಷಿಕರಿಗೆ ಬೆನ್ನು ತಿರುಗಿಸುವುದನ್ನು ಹೇಗೆ ಸ್ಪರ್ಧಾತ್ಮಕ ಪರೀಕ್ಷೆ ಎಂದು ಕರೆಯಲು ಸಾಧ್ಯ? ಇದು ಭಾಷಾವಾರು ಒಕ್ಕೂಟ ಧರ್ಮದ ಸ್ಪಷ್ಟ ಉಲ್ಲಂಘನೆಯಾಗಿದೆ. ಈ ಪರೀಕ್ಷೆಯು ಅತ್ಯಂತ ಸಹಜವಾಗಿ, ಸಂವಿಧಾನಾತ್ಮಕವಾಗಿ ಕನ್ನಡವೂ ಸೇರಿದಂತೆ ಉಳಿದ ಭಾರತೀಯ ಭಾಷೆಗಳಲ್ಲಿಯೂ ಸಿಗಬೇಕು.

- ಗಿರೀಶ್ ಮತ್ತೇರ, ಯರಗಟ್ಟಿಹಳ್ಳಿ, ಚನ್ನಗಿರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು