ಬುಧವಾರ, ಜನವರಿ 29, 2020
30 °C

ಕಾಫಿಗೆ ವಿಮೆ: ವಾಸ್ತವ ಅರಿಯಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳೆ ವಿಮೆ ವ್ಯಾಪ್ತಿಗೆ ಕಾಫಿ ಬೆಳೆಯನ್ನೂ ಸೇರಿಸಿ ಫಸಲ್‌ ಬಿಮಾ ಯೋಜನೆಯಡಿ ತರಲು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವುದಾಗಿ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದ್ದಾರೆ. ಇದನ್ನು ಓದಿ ನಗಬೇಕೋ ಅಳಬೇಕೋ ತಿಳಿಯಲಿಲ್ಲ. ಹವಾಮಾನ ವಿಮೆ ಅಡಿಯಲ್ಲಿ ಆ ಪ್ರಯತ್ನ ಮಾಡಲಾಗಿತ್ತು. ಇದಕ್ಕೆ ರಿಸ್ಕ್ ಹಾಗೂ ಪ್ರೀಮಿಯಂ ಲೆಕ್ಕ ಮಾಡುವ ವಿಮಾ ಗಣಿತಜ್ಞರು (Actuary) ಬೇಕಾಗುತ್ತಾರೆ. ತೋಟಗಾರಿಕೆ ಬೆಳೆಗಳಲ್ಲಿ ಇದು ಕಷ್ಟದ ಕೆಲಸ. 2018ರ ಅಂಕಿಅಂಶಗಳ ಪ್ರಕಾರ, ಇದಕ್ಕೆ ಬೇಕಾದ ಪೂರ್ಣ ಶೈಕ್ಷಣಿಕ ಅರ್ಹತೆ ಇದ್ದವರ ಸಂಖ್ಯೆ ಭಾರತದಲ್ಲಿ 375 ಮಾತ್ರ.

ಫಾರ್ಮರ್ (ರೈತ) ಪದದ ಅರ್ಥವನ್ನು ವ್ಯಾಖ್ಯಾನಿಸುವುದೇ ಕೇಂದ್ರ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಹಾಗಿರುವಾಗ, ಕಾಫಿ ಬೆಳೆಯನ್ನು ಸರಿಯಾಗಿ ವರ್ಗೀಕರಿಸಿ ವಿಮೆಯಡಿ ತಂದೀತೆ? ವಿಷಯದ ಹಿನ್ನೆಲೆ ಅರಿಯದೆ ಆಶ್ವಾಸನೆ ಕೊಡು ವುದು ಸರಿಯಲ್ಲ.

ಎಚ್.ಎಸ್.ಮಂಜುನಾಥ, ಗೌರಿಬಿದನೂರು

ಪ್ರತಿಕ್ರಿಯಿಸಿ (+)