ವೈದ್ಯಕೀಯ ವ್ಯವಸ್ಥೆ ಬದಲಾಗುವುದು ಎಂದು?
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 1788 ಹಳ್ಳಿಗಳಿದ್ದರೂ ಇರುವುದು 57 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮಾತ್ರ! (ಪ್ರ.ವಾ., ಜೂನ್ 3). ಅಲ್ಲಿಗೆ 32 ಹಳ್ಳಿಗಳಿಗೆ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರ ಎಂದಾಯಿತು. ಒಂದು ಹಳ್ಳಿಯ ಜನಸಂಖ್ಯೆ ಕನಿಷ್ಠ ಎರಡು ಸಾವಿರ ಇದ್ದರೆ, ಒಂದು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಒಬ್ಬ ನುರಿತ ವೈದ್ಯರು ಇದ್ದರೆ, ಆ ವೈದ್ಯರು 64,000 ರೋಗಿಗಳನ್ನು ಪರೀಕ್ಷಿಸಬೇಕಾಗುತ್ತದೆ (ಎಲ್ಲರೂ ರೋಗಿಗಳಾದರೆ ಇದು ಅನ್ವಯವಾಗುತ್ತದೆ. ಆದರೆ ಹಾಗಾಗಿಲ್ಲ, ಕೊರೊನಾ ನಮ್ಮ ಮೇಲೆ ದಯೆ ತೋರಿದೆ).
ನಮ್ಮ ಭಾರತೀಯ ವೈದ್ಯಕೀಯ ವ್ಯವಸ್ಥೆ ಯಾವ ಆಧಾರದ ಮೇಲೆ ಇದೆಯೋ ತಿಳಿಯದು. ಜರ್ಮನಿಯಲ್ಲಿ ಕನಿಷ್ಠ 25 ಜನರಿಗೆ ಒಬ್ಬ ವೈದ್ಯರಿದ್ದಾರಂತೆ. ಒಂದು ಕರೆ ಮಾಡಿದರೆ ಮನೆಗೆ ಬಂದು ಪರೀಕ್ಷಿಸುತ್ತಾರೆ. ಇಂತಹ ವ್ಯವಸ್ಥೆ ಭಾರತದಲ್ಲಿ ಬರುವುದು ಯಾವಾಗ?
-ಜ್ಞಾನೇಶ್ವರ ಪಿಸೆ, ರಾಣೆಬೆನ್ನೂರು
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.