ಶುಕ್ರವಾರ, ಆಗಸ್ಟ್ 19, 2022
25 °C

ವಾಚಕರ ವಾಣಿ: ಭರವಸೆ ಬೇಡ, ಅನುಷ್ಠಾನ ಬೇಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲ್ಯಾಣ ಕರ್ನಾಟಕ ದಿನವನ್ನು ಇತ್ತೀಚೆಗಷ್ಟೇ ಆಚರಿಸಿದೆವು. ಹೈದರಾಬಾದ್‌ ಕರ್ನಾಟಕ ಎಂಬ ಹೆಸರಿಗೆ ಬದಲಾಗಿ ಕಲ್ಯಾಣ ಕರ್ನಾಟಕ ಎಂಬ ಹೆಸರಿನ ಬಳಕೆ ಕಳೆದ ವರ್ಷದಿಂದ ಪ್ರಾರಂಭವಾಗಿದೆ. ಈ ಹೆಸರು ಬದಲಾವಣೆಗೆ ವಿಶೇಷ ಗಮನ ನೀಡಿದ್ದು ಅಭಿವೃದ್ಧಿಗೆ ಒತ್ತು ಕೊಡುವ ಸಲುವಾಗಿಯೇ ವಿನಾ ಕೇವಲ ಆಚರಣೆ ಮಾಡುವುದಕ್ಕಲ್ಲ. ಮುಂದೆ ಆಚರಣೆಯಷ್ಟೇ ಉಳಿದು ನಿಜವಾದ ಆಶಯ ಮರೆಯಾಗಬಹುದು ಎಂಬ ಆತಂಕ ಕಾಡುತ್ತದೆ.

ಶಿಕ್ಷಣ, ಪೌಷ್ಟಿಕತೆ, ಉದ್ಯೋಗ, ಮೂಲಸೌಕರ್ಯ, ಮಾನವ ಅಭಿವೃದ್ಧಿ... ಹೀಗೆ ಎಲ್ಲದರಲ್ಲೂ ಹೆಚ್ಚು ಕಡಿಮೆ ಈ ವ್ಯಾಪ್ತಿಯ ಜಿಲ್ಲೆಗಳ ಸ್ಥಾನ ಕೊನೆಯಿಂದ ಪ್ರಥಮ. ನಮಗೆ ಭರವಸೆ ಬೇಡ, ಅನುಷ್ಠಾನ ಬೇಕು. ನಿಜವಾಗಿ ಅಲ್ಲಿ ಅಂದುಕೊಂಡಂತೆ ಅಭಿವೃದ್ಧಿ ಆಗದ ಹೊರತು ಕಲ್ಯಾಣ ಎಂಬುದು ಹೆಸರಿಗೆ ಮಾತ್ರ ಸೀಮಿತವಾಗುತ್ತದೆ.

ಆನಂದ, ಸಿಂಧನೂರು, ರಾಯಚೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು