ಬುಧವಾರ, ಏಪ್ರಿಲ್ 1, 2020
19 °C

ಖಾತೆ ಬದಲಾವಣೆ ಎಂಬ ಅರಣ್ಯರೋದನ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅರಣ್ಯ ನಿಯಮ ಉಲ್ಲಂಘನೆ ಸೇರಿದಂತೆ ತಮ್ಮ ವಿರುದ್ಧ 15 ಪ್ರಕರಣಗಳು ಇರುವುದನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದ ಪ್ರಮಾಣಪತ್ರದಲ್ಲಿ ಅರಣ್ಯ ಸಚಿವ ಆನಂದ್ ಸಿಂಗ್ ಅವರೇ ಉಲ್ಲೇಖಿಸಿದ್ದಾರಂತೆ! ಹೀಗಾಗಿ ಅವರ ಖಾತೆ ಬದಲಿಸುವಂತೆ ಒತ್ತಡ ಹೆಚ್ಚಾಗಿದೆ. ಕೀಟಲೆ ಮಾಡುವ ಪುಂಡುಪೋಕರಿಯನ್ನು ಅದೇ ತರಗತಿಯ ಲೀಡರನ್ನಾಗಿ ಮಾಡುವ ಪರಿಪಾಟ ಕೆಲವು ಶಾಲಾ-ಕಾಲೇಜುಗಳಲ್ಲಿದೆ! ಹೀಗೆ ಮಾಡಿದರೆ ವಿಧಿಯಿಲ್ಲದೆ ಆತನ ಪೋಕರಿತನಕ್ಕೆ ಬ್ರೇಕ್ ಬೀಳಬಹುದು ಎನ್ನುವುದು ಶಾಲಾ ಮುಖ್ಯಸ್ಥರ ಅನಿಸಿಕೆ!

ಅಕಸ್ಮಾತ್ ಲೀಡರಾದ ಆ ಪುಂಡು ಪೋಕರಿಯ ಕೀಟಲೆ ಹೆಚ್ಚಾದರೆ ಮಾತ್ರ ಕಷ್ಟ! ಅರಣ್ಯ ನಿಯಮ ಉಲ್ಲಂಘನೆಯ ಆರೋಪ ಹೊತ್ತ ಅರಣ್ಯ ಸಚಿವರ ಖಾತೆ ಬದಲಾವಣೆಯ ವಿಚಾರದಲ್ಲಿ ನಡೆಯುತ್ತಿರುವ ಒತ್ತಡವೂ ಅರಣ್ಯರೋದನ ಆಗುತ್ತಿರಬಹುದೇ? 

–ಪಿ.ಜೆ.ರಾಘವೇಂದ್ರ, ಮೈಸೂರು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು