ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊರದೂಡಬೇಡಿ, ಒಳಕ್ಕೆ ಕರೆತನ್ನಿ

ಅಕ್ಷರ ಗಾತ್ರ

ಕರ್ನಾಟಕವೂ ಸೇರಿದಂತೆ ದೇಶದ ನಾನಾ ಭಾಗಗಳಲ್ಲಿ ಈಗ ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ
ನಡುವೆ ಬೇರೆಬೇರೆ ವಿಚಾರಗಳು ಮುನ್ನೆಲೆಗೆ ಬಂದಿವೆ. ಇವೆಲ್ಲ ಆರ್ಥಿಕ, ವಿದೇಶಾಂಗ, ಕೈಗಾರಿಕೆ, ಹೂಡಿಕೆಯ ದೃಷ್ಟಿಗಳಿಂದ ರಾಜ್ಯ ಹಾಗೂ ದೇಶಕ್ಕೆ ಪ್ರತಿಕೂಲ ಪರಿಣಾಮಗಳನ್ನು ತಂದೊಡ್ಡುವ ಹಿಮ್ಮುಖ ಚಲನೆಗಳಷ್ಟೆ. ಏಕೆಂದರೆ, ನಾವು ಬದುಕುತ್ತಿರುವ ಈ ಕಾಲಘಟ್ಟವು ಸಂಕೀರ್ಣವಾದ ಅಂತರ್‌ ಅವಲಂಬನೆಯಿಂದ ಕೂಡಿದ್ದು, ಹಿಂದೂಗಳನ್ನು ಮುಸ್ಲಿಮರು ಮತ್ತು ಮುಸ್ಲಿಮರನ್ನು ಹಿಂದೂಗಳು ಹಲವು ನೆಲೆಗಳಲ್ಲಿ ಆತುಕೊಂಡಿದ್ದಾರೆ. ಎರಡೂ ಕೋಮಿನವರು ಮುಖ ತಿರುಗಿಸಿಕೊಂಡು ಬದುಕುವುದಂತೂ ಅಸಂಭವ.

ಮುಖ್ಯವಾಗಿ, ಹಿಂದೂಗಳು ಮತ್ತು ಮುಸ್ಲಿಮರಲ್ಲಿ ಭಿನ್ನಾಭಿಪ್ರಾಯ ಸೃಷ್ಟಿಯಾಗುವುದು ಧರ್ಮಕ್ಕೆ ಸಂಬಂಧಿಸಿದ ಅಂಶಗಳಲ್ಲಿ. ಹಿಂದೂಗಳಲ್ಲಿ ಧಾರ್ಮಿಕ ಸುಧಾರಣೆ ಸುಮಾರು 300 ವರ್ಷಗಳಿಂದಲೂ ನಡೆಯುತ್ತಿದೆ. ಆದರೆ, ಮುಸ್ಲಿಮರಲ್ಲಿ ಇದು ಆಧುನಿಕ ಕಾಲಕ್ಕೆ ತಕ್ಕಂತಿಲ್ಲ. ಅಂದಮಾತ್ರಕ್ಕೆ ದೇಶದ ಜನಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿರುವ ಮುಸ್ಲಿಮರನ್ನು ಹೊರದಬ್ಬಬೇಕಾಗಿಲ್ಲ. ಬದಲಿಗೆ, ಅವರನ್ನು ವೈಜ್ಞಾನಿಕ ಮನೋಭಾವ, ಸಮಕಾಲೀನ ಜಗತ್ತಿನ ಒಲವುಗಳು, ವೈಚಾರಿಕತೆ, ವಿಚಾರ ವಿನಿಮಯ, ಸಾಮುದಾಯಿಕ ಜಾಗೃತಿ ಇತ್ಯಾದಿಗಳ ಮೂಲಕ ವರ್ತಮಾನದ ಜಗತ್ತಿನೊಳಕ್ಕೆ ತರಬೇಕು. ಇದು ಹಿಂದೂ- ಮುಸ್ಲಿಂ ಧರ್ಮದ ಪ್ರಶ್ನೆಯಲ್ಲ; ಬದಲಿಗೆ, ಕಾಲಧರ್ಮದ ಪ್ರಶ್ನೆ!

ನಮ್ಮ ಡೆಮಾಕ್ರಸಿ ಬಲಗೊಳ್ಳಬೇಕಾದ ಕ್ರಮವಿದು. ಹೀಗಾದಾಗ, ತಾವು ಭಾರತೀಯತೆಯೊಳಗೆ ಸೇರಬೇಕಾದ್ದು ತಮ್ಮ ನೈತಿಕ ಹೊಣೆಗಾರಿಕೆ ಎನ್ನುವ ಅರಿವು ಮುಸ್ಲಿಮರಲ್ಲಿ ಬರುತ್ತದೆ. ಇಲ್ಲದಿದ್ದರೆ, ಡೆಮಾಕ್ರಸಿ ಹೋಗಿ ಥಿಯಾಕ್ರಸಿ ಹೆಡೆ ಎತ್ತುತ್ತದೆ. ಪ್ರಜಾಪ್ರಭುತ್ವದ ಚೆಲುವನ್ನು ಎಲ್ಲ ಸಮುದಾಯಗಳೂ ಅರ್ಥ ಮಾಡಿಕೊಳ್ಳಬೇಕು. ‘ಮುಸ್ಲಿಮರನ್ನು ಹೊರದಬ್ಬಬೇಡಿ, ಒಳಕ್ಕೆ ಕರೆತನ್ನಿ!’ ಎನ್ನಬೇಕಾದದ್ದೇ ಈಗಿನ ಜರೂರು.

- ಬಿ.ಎಸ್.ಜಯಪ್ರಕಾಶ ನಾರಾಯಣ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT