ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ಹಾಲಿನ ದರ ಏರಿಕೆ: ವಿತಂಡವಾದ

Last Updated 2 ಸೆಪ್ಟೆಂಬರ್ 2022, 2:01 IST
ಅಕ್ಷರ ಗಾತ್ರ

ನಂದಿನಿ ಹಾಲಿನ ದರವನ್ನು ಲೀಟರ್‌ಗೆ ₹ 3 ಹೆಚ್ಚಳ ಮಾಡುವಂತೆ ಕರ್ನಾಟಕ ಹಾಲು ಮಹಾಮಂಡಳಿಯು (ಕೆಎಂಎಫ್) ಸರ್ಕಾರಕ್ಕೆ ಮನವಿ ಮಾಡಿರುವುದಾಗಿ ವರದಿಯಾಗಿದೆ. ಅದಕ್ಕೆ ವ್ಯವಸ್ಥಾಪಕ ನಿರ್ದೇಶಕರು ಕೊಟ್ಟಿರುವ ಕಾರಣ, ಖಾಸಗಿಯವರು ಮಾರಾಟ ಮಾಡುವ ಲೀಟರ್‌ ಹಾಲಿನ ದರ 40ಕ್ಕೂ ಹೆಚ್ಚು ಹಾಗೂ ಏರಿಕೆ ದರದ ಮೊತ್ತವನ್ನು ರೈತರಿಗೆ ವರ್ಗಾಯಿಸಲಾಗುವುದು ಎನ್ನುವುದು! ಇದೊಂದು ಹಾಸ್ಯಾಸ್ಪದವಾದ ಹೇಳಿಕೆಯಾಗಿದೆ. ಈಗಾಗಲೇ ನಂದಿನಿಯವರು ಹಾಲನ್ನು ಲೀಟರ್‌ಗೆ ₹ 37ರಿಂದ ₹ 44ರವರೆಗೂ ಮಾರಾಟ ಮಾಡುತ್ತಿದ್ದಾರೆ. ಜೊತೆಗೆ ಹಾಲಿನ ಉತ್ಪನ್ನಗಳಾದ ತುಪ್ಪ, ಬೆಣ್ಣೆ, ಚೀಸ್ ಮುಂತಾದ ಉತ್ಪನ್ನಗಳ ಬೆಲೆ ಸರ್ಕಾರದ ನಿಯಂತ್ರಣವಿಲ್ಲದೆ ಏರಿಕೆಯಾಗುತ್ತಿದೆ.

ಕೆಎಂಎಫ್‌ ಕಡಿಮೆ ದರಕ್ಕೆ ಹಾಲು ಮಾರಿದರೆ ಗ್ರಾಹಕರು ನಂದಿನಿ ಹಾಲನ್ನು ಬಿಟ್ಟು ಖಾಸಗಿ ಹಾಲನ್ನೇ ಏಕೆ ಕೊಳ್ಳುತ್ತಾರೆ? ಇವರ ಉತ್ಪನ್ನದ ಗುಣಮಟ್ಟದಲ್ಲಿ ಏನಾದರೂ ಸಮಸ್ಯೆ ಇದೆಯೇ? ಖಾಸಗಿ ಹಾಲು ದುಬಾರಿಯಾದರೂ ಜನ ಅದನ್ನೇ ಕೊಳ್ಳುವುದೇಕೆ? ನಂದಿನಿ ಹಾಲು ಹೆಚ್ಚು ಮಾರಾಟವಾದರೆ, ಈಗ ಉಳಿಯುತ್ತಿರುವ ಲಕ್ಷಾಂತರ ಲೀಟರ್ ಹಾಲನ್ನು ಪುಡಿ ಮಾಡುವ ಖರ್ಚು ಉಳಿಯುವುದಿಲ್ಲವೇ? ವಾಸ್ತವ ಹೀಗಿರುವಾಗ ಹಾಲಿನ ದರ ಏರಿಕೆ ಮಾತೇಕೆ? ಇನ್ನು ಖಾಸಗಿಯವರು ಏರಿಸಿದ್ದಾರೆ ಎಂದು ಇವರು ಬೆಲೆ ಏರಿಸುವುದು, ಕೆಎಂಎಫ್‌ ಏರಿಸಿದೆ ಎಂದು ಖಾಸಗಿಯವರು ಬೆಲೆ ಏರಿಸುವುದು. ಇದೊಂದು ಪರಸ್ಪರ ಅಲಿಖಿತ ಒಪ್ಪಂದದಂತಿದೆ. ಉತ್ಪನ್ನದ ಬೆಲೆ ಎಷ್ಟು ಹಾಗೂ ಜಿಎಸ್‌ಟಿ ಎಷ್ಟು ಎನ್ನುವುದನ್ನು ಪ್ರತ್ಯೇಕವಾಗಿ ತೋರಿಸಿ ಮುದ್ರಿಸುವಂತೆ ಸರ್ಕಾರ ಸೂಚನೆ ನೀಡಬೇಕು.

-ಮುಳ್ಳೂರು ಪ್ರಕಾಶ್, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT