ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆನಪಾಗುತ್ತಿದೆ ಕುಮಾರವ್ಯಾಸನ ಮಾತು...

Last Updated 8 ಸೆಪ್ಟೆಂಬರ್ 2021, 19:30 IST
ಅಕ್ಷರ ಗಾತ್ರ

ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಅವರು, ‘ಬೆಲೆ ಏರಿಕೆಯಾಗಿದೆ ಎಂದು ಜನರು ಊಟ ಮಾಡುವುದು, ಪೂಜೆ ಮಾಡುವುದನ್ನು ಬಿಟ್ಟಿದ್ದಾರೆಯೇ?’ ಎಂದು ಹೇಳಿ (ಪ್ರ.ವಾ., ಸೆ. 7) ಅಗತ್ಯ ವಸ್ತುಗಳ ಬೆಲೆಯೇರಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಇದು, ಸಾಮಾನ್ಯ ಜನರ ಬಗೆಗೆ ಜನಪ್ರತಿನಿಧಿಗಳು ಸಂವೇದನಾಶೂನ್ಯರಾಗುತ್ತಿರುವುದರ ಸೂಚಕ. ಹಸಿವು ಎಂದರೇನೆಂದು ಇವರು ಅರಿಯದೆ ಇರುವುದಷ್ಟೇ ಅಲ್ಲ ಬಡವರ ಹಸಿವಿನ ಸಮಸ್ಯೆಯ ಬಗೆಗಿನ ಅಣಕದ ಮನಃಸ್ಥಿತಿ ಯನ್ನು ತೋರಿಸುತ್ತದೆ!‌

ಕನ್ನಡದ ಮಹಾಕವಿ ಕುಮಾರವ್ಯಾಸ ಹೇಳಿದ, ‘ಅರಸು ರಾಕ್ಷಸ, ಮಂತ್ರಿಯೆಂಬುವ/ ಮೊರೆವ ಹುಲಿ ಪರಿವಾರ ಹದ್ದಿನ/ ನೆರವಿ ಬಡವರ ಬಿನ್ನಪವನಿನ್ನಾರು ಕೇಳುವರು/ ಉರಿಉರಿವುತಿದೆ ದೇಶ...’ ಎಂಬ ಮಾತು ಥಟ್ಟನೆ ನೆನಪಾಗಿ ವಿಷಾದದ ಭಾವ ಆವರಿಸಿಕೊಳ್ಳುತ್ತದೆ.

- ಪು.ಸೂ.ಲಕ್ಷ್ಮೀನಾರಾಯಣ ರಾವ್,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT