ಶುಕ್ರವಾರ, ಮೇ 29, 2020
27 °C

ವಾಚಕರ ವಾಣಿ| ಲಂಚ ಕೊಟ್ಟವರು ಯಾರು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಾಕ್‌ಡೌನ್‌ ಅವಧಿಯಲ್ಲಿ ಸಿಗರೇಟ್‌ ಮಾರಾಟಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಲು ಮತ್ತು ನಕಲಿ ಮಾಸ್ಕ್ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳದೇ ಇರಲು ಪೊಲೀಸರು ಲಂಚ ಪಡೆದ ಪ್ರಕರಣ (ಪ್ರ.ವಾ., ಮೇ 15) ವಿವರವಾಗಿ ವರದಿಯಾಗಿದೆ. ಇದರಲ್ಲಿ ಲಂಚ ಪಡೆದವರ ಹೆಸರು, ಹಣ ಪಡೆದ ವಿವರ ಎಲ್ಲವೂ ಇವೆ. ಆದರೆ ಲಂಚ ಕೊಟ್ಟವರು ಯಾರು ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ಒಬ್ಬ ಸಾಮಾನ್ಯ ಮನುಷ್ಯ ತನ್ನ ಕೆಲಸ ಬೇಗ ಆಗಲಿ ಎಂದು ಹಣ ಕೊಡುವುದು ಮಾಮೂಲು. ಇದರಲ್ಲಿ ಕೊಡುವವರು ಅಸಹಾಯಕರಾಗಿರುತ್ತಾರೆ ಮತ್ತು ಇದರಲ್ಲಿ ಇನ್ನೊಬ್ಬರಿಗೆ ಅನ್ಯಾಯ ಮಾಡುವ ಉದ್ದೇಶ ಇರುವುದಿಲ್ಲ. ಆದರೆ ಕಂಪನಿಗಳು ನಕಲಿ ವಸ್ತುಗಳನ್ನು ದಾಟಿಸಲು ಯತ್ನಿಸುವುದು ಮತ್ತು ಲಂಚ ಕೊಡುವುದು ದ್ವಿಗುಣ ಅಪರಾಧ. ಲಂಚ ಪಡೆದವರಂತೆ ಲಂಚ ಕೊಟ್ಟವರು ಸಹ ಸಮಾನ ಅಪರಾಧಿಗಳು. ವಾಸ್ತವದಲ್ಲಿ ಇದು ಸುಲಿಗೆ ಪ್ರಕರಣ ಅಲ್ಲ. ಏಕೆಂದರೆ ಲಕ್ಷಗಟ್ಟಲೆ ಲಂಚ ನೀಡಿದವರು ಸಾಮಾನ್ಯರಲ್ಲ. ಆದ್ದರಿಂದ ಲಂಚ ಕೊಟ್ಟವರ ಮೇಲೆ ಯಾವ ರೀತಿ ಕ್ರಮ ಜರುಗಿಸಲಾಗುತ್ತಿದೆ ಎನ್ನುವುದು ಬಹಿರಂಗಗೊಳ್ಳಬೇಕು.

– ಪ್ರೊ. ಶಶಿಧರ್‌ ಪಾಟೀಲ್‌, ಬಾಗಲಕೋಟೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು