ಶುಕ್ರವಾರ, ಮೇ 29, 2020
27 °C

ವಾಚಕರ ವಾಣಿ| ಸೋಂಕು ಪರಿಣಾಮಕಾರಿ ನಿಯಂತ್ರಣಕ್ಕೆ ಜನಾರೋಗ್ಯ ತಜ್ಞರ ಸಲಹೆ ಮುಖ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊರೊನಾ ಸೋಂಕಿನ ತಪಾಸಣೆ ಹೆಚ್ಚಾದಂತೆ ಪಾಸಿಟಿವ್ ಪ್ರಕರಣಗಳ ಸಂಖ್ಯೆಯೂ ಹೆಚ್ಚುತ್ತಿದೆ. ಈ ಕುರಿತು ಟಿ.ವಿ ಚಾನೆಲ್‍ವೊಂದಕ್ಕೆ ಸಂದರ್ಶನ ನೀಡಿದ ಬೆಂಗಳೂರಿನ ಪಬ್ಲಿಕ್ ಹೆಲ್ತ್‌ ಫೌಂಡೇಶನ್ ಆಫ್ ಇಂಡಿಯಾದ ಜನಾರೋಗ್ಯ ತಜ್ಞರೊಬ್ಬರ ಅಭಿಪ್ರಾಯದಂತೆ, ಎಲ್ಲಿ ಹೆಚ್ಚು ಪಾಸಿಟಿವ್ ಪ್ರಕರಣಗಳು ಕಂಡು ಬರುತ್ತವೆಯೋ ಅದು ಉತ್ತಮ ಬೆಳವಣಿಗೆ. ಅಲ್ಲಿನ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಯು ಉತ್ತಮ ಸೋಂಕು ಸರ್ವೇಕ್ಷಣೆ ಕೈಗೊಂಡಿದೆ ಎಂದು ಅರ್ಥ. ಒಂದೊಮ್ಮೆ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಕಡಿಮೆ ಇದೆ ಅಥವಾ ಪಾಸಿಟಿವ್ ಪ್ರಕರಣಗಳೇ ಇಲ್ಲ ಎಂದರೆ, ಅದು ಎರಡು ಸಾಧ್ಯತೆಗಳನ್ನು ಸೂಚಿಸುತ್ತದೆ. ಒಂದು, ಅಲ್ಲಿ ಯಾವುದೇ ಪಾಸಿಟಿವ್ ಪ್ರಕರಣಗಳು ಇಲ್ಲವೇ ಇಲ್ಲ ಎಂದು, ಎರಡನೆಯದು, ಪಾಸಿಟಿವ್ ಪ್ರಕರಣಗಳು ಇದ್ದರೂ ನಿಗದಿತ ಸಂಖ್ಯೆಯಲ್ಲಿ ತಪಾಸಣೆ ಆಗದ ಕಾರಣ ಪಾಸಿಟಿವ್ ಪ್ರಕರಣಗಳು ಹೊರಬರುತ್ತಿಲ್ಲ ಎಂದು.

ಈ ಮಾತನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಸೋಂಕನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ವಿವಿಧ ಸಾರ್ವಜನಿಕ ಆರೋಗ್ಯ ಸಂಸ್ಥೆಗಳಲ್ಲಿನ ಜನಾರೋಗ್ಯ ತಜ್ಞರ ಸಲಹೆ ಪಡೆಯಬೇಕು. ಅಷ್ಟೇ ಏಕೆ, ಈ ಸೋಂಕನ್ನು ಆಮೂಲಾಗ್ರವಾಗಿ ನಿಯಂತ್ರಿಸುವ ಸಂಪೂರ್ಣ ಜವಾಬ್ದಾರಿಯನ್ನು ಈ ತಜ್ಞರಿಗೇ ವಹಿಸಿಕೊಡಬೇಕು. ಇದರಿಂದ ಕೊರೊನಾದಂತಹ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿಭಾಯಿಸಲು ಸಾಧ್ಯ.

- ಭುವನೇಶ್ವರಿ ಅಚ್ಚೀಗಾಂವ, ವಿಜಯಪುರ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು