ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೌತಿ ಖಾತೆ: ಅವೈಜ್ಞಾನಿಕ ತೀರ್ಮಾನ

Last Updated 24 ಜೂನ್ 2022, 21:03 IST
ಅಕ್ಷರ ಗಾತ್ರ

ಜುಲೈನಲ್ಲಿ ನಡೆಯುವ ಕಂದಾಯ ಇಲಾಖೆಯ ಉದ್ದೇಶಿತ ಪೌತಿ ಖಾತೆ ಆಂದೋಲನದಲ್ಲಿ ಪೌತಿ ವಾರಸು ಖಾತೆ ಬದಲಾವಣೆ ಮಾಡುವ ಅಧಿಕಾರವನ್ನು ಉಪವಿಭಾಗಾಧಿಕಾರಿಗೆ ನೀಡಲಾಗುವುದೆಂದು ವರದಿಯಾಗಿದೆ. ಪ್ರಸ್ತುತ ಖಾತೆ ಬದಲಾವಣೆ ಅಧಿಕಾರ ತಹಶೀಲ್ದಾರ್‌ಗಳಿಗಿದೆ. ಅಧಿಕಾರ ವಿಕೇಂದ್ರೀಕರಣ ಪ್ರಯೋಗಗಳಲ್ಲಿ ತಳಹಂತದ ಅಧಿಕಾರಿಗಳಿಗೆ ಅಧಿಕಾರ ನೀಡುವುದು ಹಾಗೂ ಸರಳೀಕರಣ ಮಾಡುತ್ತಿರುವ ಕಾಲಮಾನದಲ್ಲಿ ಈ ಬಗೆಯ ಅಧಿಕಾರ ವರ್ಗಾವಣೆ ಅವೈಜ್ಞಾನಿಕವಾಗಿದೆ.

ಎಲ್ಲ ಬಗೆಯ ಖಾತೆ ಬದಲಾವಣೆಯ ಸಮಯದಲ್ಲಿ ಜಾರಿ ಮಾಡುವ ನಮೂನೆ 12 ಮತ್ತು 21 ಜಾರಿ ಮಾಡದೇ ಹಾಗೂ ಆಕ್ಷೇಪಗಳಿಗೆ ಅವಕಾಶ ನೀಡದೇ ಮಾಡಲು ಹೊರಟಿರುವ ಖಾತೆ ಬದಲಾವಣೆ ಆಂದೋಲನದಿಂದ ಮುಂದಿನ ದಿನಗಳಲ್ಲಿ ಮತ್ತದೇ ಕಂದಾಯ ಇಲಾಖೆಯ ನ್ಯಾಯಾಲಯಗಳಲ್ಲಿ
ವಿವಾದಾಸ್ಪದ ಪ್ರಕರಣಗಳು ಹೆಚ್ಚು ದಾಖಲಾಗುವ ಸ್ಥಿತಿ ನಿರ್ಮಾಣವಾಗಬಹುದು. ಆದ್ದರಿಂದ, ಪೌತಿ ಖಾತೆ ಆಂದೋಲನದಲ್ಲಿ ಖಾತೆ ಬದಲಾವಣೆಯ ಅಧಿಕಾರವನ್ನು ತಹಶೀಲ್ದಾರ್‌ಗಳಿಗೇ ಉಳಿಸಿ, ನಿಯಮಾನುಸಾರ ಆಕ್ಷೇಪಗಳಿಗೆ ಕಾಲಾವಕಾಶ ಒದಗಿಸಿ ಖಾತೆ ಬದಲಾವಣೆ ಮಾಡುವುದು ಸೂಕ್ತ.⇒

- ಲಕ್ಷ್ಮೀಕಾಂತರಾಜು ಎಂ.ಜಿ.,ಮಠಗ್ರಾಮ, ಗುಬ್ಬಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT