ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ಫಾಸ್ಟ್ ಫುಡ್‌ನಂತೆ ಫಾಸ್ಟ್ ವರ್ಕ್‌ನಲ್ಲೂ ಅಪಾಯ

Last Updated 15 ನವೆಂಬರ್ 2022, 20:15 IST
ಅಕ್ಷರ ಗಾತ್ರ

ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿನ ಸಾರ್ವಜನಿಕ ಸಮಾರಂಭದಲ್ಲಿ ಸ್ಕೇಲ್ ಹಾಗೂ ಸ್ಪೀಡ್‌ ಬಗ್ಗೆ ಮಾತನಾಡಿರುವುದು ವಿಚಿತ್ರ ಎನಿಸುತ್ತದೆ. ಕೆಲಸವೊಂದರ ಗುಣಮಟ್ಟ ಮೊದಲು ಚೆನ್ನಾಗಿರಬೇಕು. ಬೃಹತ್ ಯೋಜನೆಯೊಂದು ವೇಗವಾಗಿ ನಡೆದು ಸಮಯಪೂರ್ವ ಮುಗಿಯಿತು ಎಂಬುದು ಅತ್ಯಂತ ಮುಖ್ಯವಲ್ಲ. ಉದಾಹರಣೆಗೆ, ಮೊರ್ಬಿ ಸೇತುವೆಯನ್ನು ತರಾತುರಿಯಲ್ಲಿ ತೆರೆದು ಏನಾಯಿತು? ಫಾಸ್ಟ್ ಫುಡ್‌ನಂತೆ ಫಾಸ್ಟ್ ವರ್ಕ್‌ನಲ್ಲೂ ಅಪಾಯದ ಸಂಭವ ಇದ್ದೇ ಇರುತ್ತದೆ. ಹಾಗೆಯೇ ಗಾತ್ರ ದೊಡ್ಡದಿರುವಾಗ ನಿರ್ವಹಣೆ ಸವಾಲೆನಿಸುತ್ತದೆ.

ಉದಾಹರಣೆಗೆ, ನಮ್ಮೂರು ಗೌರಿಬಿದನೂರಿನ ಮೇಲ್ಸೇತುವೆ ಯೋಜನೆಯೊಂದು ಸಂಕೀರ್ಣ ಸಮಸ್ಯೆಗಳ ಕಾರಣ ವರ್ಷಾನುಗಟ್ಟಲೆ ಎಳೆದಿದೆ. ಹಿಂದಿನವರಿಗಿಂತ ನಾವು ಮೇಲು ಎಂಬ ಹಮ್ಮು ಆರೋಗ್ಯಕರ ಅಲ್ಲ. ವಂದೇ ಭಾರತ್ ರೈಲು ಆರಂಭವಾದ ಮಾತ್ರಕ್ಕೆ ಭಾರತದ ಜಡತೆ ಅಳಿಯಿತು ಎನ್ನುವುದು ಉತ್ಪ್ರೇಕ್ಷೆಯ ಮಾತು.
ಎಚ್.ಎಸ್.ಮಂಜುನಾಥ, ಗೌರಿಬಿದನೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT