ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಜನಸಂಖ್ಯೆಯಲ್ಲಿ ಮುಂದು, ಅಭಿವೃದ್ಧಿಯಲ್ಲಿ ಹಿಂದು

Last Updated 9 ಮೇ 2022, 21:45 IST
ಅಕ್ಷರ ಗಾತ್ರ

ಶಿಕ್ಷಣ ಮತ್ತು ಅಭಿವೃದ್ಧಿಗೆ ನಂಟು ಇರುತ್ತದೆ. ಶಿಕ್ಷಣದಿಂದ ಬಡತನ ನಿರ್ಮೂಲನ, ಆರೋಗ್ಯ ವೃದ್ಧಿ, ಬುದ್ಧಿಶಕ್ತಿ, ಮಾನಸಿಕ ಚಾತುರ್ಯಗಳ ಬೆಳವಣಿಗೆ ಸಾಧ್ಯ. ಇವುಗಳ ಜೊತೆಗೆ ಇಂಗ್ಲಿಷ್ ಶಿಕ್ಷಣ ಹೆಚ್ಚಿರುವ ರಾಜ್ಯಗಳಲ್ಲಿ ಅಭಿವೃದ್ಧಿಗೆ ಹೆಚ್ಚು ಸಹಕಾರಿ. ಹೀಗಿರುವಾಗ, ಶಿಕ್ಷಣ ಕ್ಷೇತ್ರವೇ ಭ್ರಷ್ಟಾಚಾರದಲ್ಲಿ ಮುಳುಗಿದರೆ ದೇಶ ಅಭಿವೃದ್ಧಿಯಾಗುವುದೇ? ದೇಶದ ರಕ್ಷಣೆಗೆ ರಕ್ಷಣಾ ಪಡೆ, ಕಾನೂನು ಪರಿಪಾಲನೆಗೆ ಪೋಲಿಸ್ ಪಡೆ ಅವಶ್ಯವಾಗಿರುವಾಗ ಪೊಲೀಸ್‌ ಇಲಾಖೆಗೆ ನಿಯೋಜಿತರಾಗುವವರೇ ಭ್ರಷ್ಟಾಚಾರದಲ್ಲಿ ಮುಳುಗಿದರೆ ಆಂತರಿಕ ಶಾಂತಿ ಪರಿಪಾಲನೆ ಸಾಧ್ಯವೇ?

ಈ ವಿಷಯಗಳನ್ನು ಗಂಭೀರವಾಗಿ ಪರಿಗಣಿಸದೆ, ರಾಜಕೀಯ ಪಕ್ಷಗಳು ವೈಯಕ್ತಿಕ ಕೆಸರೆರಚಾಟದಲ್ಲಿ ತೊಡಗುವುದು ಸರಿಯೇ? ಶಿಕ್ಷಣ ಮತ್ತು ರಕ್ಷಣೆಯ ವಿಷಯಗಳನ್ನು ಧರ್ಮಾತೀತವಾಗಿ, ಪಕ್ಷಾತೀತವಾಗಿ, ಜಾತ್ಯತೀತವಾಗಿ ನಿರ್ಧರಿಸಿ ದೇಶವನ್ನು ರಕ್ಷಿಸುವುದಲ್ಲದೆ, ಮುಂದಿನ ಪೀಳಿಗೆಯ ಶ್ರೇಯೋಭಿವೃದ್ಧಿಗಾಗಿ ಎಲ್ಲರೂ ಬದ್ಧರಾಗಬೇಕಲ್ಲವೇ? ಇಷ್ಟು ದೊಡ್ಡ ದೇಶದ ಭಾಗಶಃ ಜನರು ಮಾತ್ರ ಎಲ್ಲ ಕ್ಷೇತ್ರಗಳಲ್ಲಿ ಮುಂದುವರಿದಿರುವಾಗ, ಉಳಿದ ಕೆಳವರ್ಗದವರನ್ನೂ ವಂಚಿತರನ್ನೂ ಅನಕ್ಷರಸ್ಥರನ್ನೂ ಹಿಂದುಳಿದವರನ್ನೂ ಎಲ್ಲ ಕ್ಷೇತ್ರಗಳಲ್ಲಿ ಬೆಳೆಸಿದರೆ ವಿಶ್ವದಲ್ಲಿ ಮಾನ್ಯತೆ ಗಳಿಸಬಹುದಲ್ಲವೇ?

ಕೆ.ಎನ್.ಭಗವಾನ್,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT