ಭಾನುವಾರ, ನವೆಂಬರ್ 27, 2022
26 °C

ವಾಚಕರ ವಾಣಿ: ಸೈದ್ಧಾಂತಿಕ ಸ್ಪಷ್ಟತೆ ಇತರರಲ್ಲೂ ಇದೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ರಾಹುಲ್ ಮತ್ತು ರಾಜಕೀಯ ತಂತ್ರಗಾರಿಕೆ’ ಎಂಬ ದಿನೇಶ್ ಅಮಿನ್ ಮಟ್ಟು ಅವರ ಲೇಖನದಲ್ಲಿ (ಪ್ರ.ವಾ., ಸೆ. 29) ಒಂದು ಕಡೆ, ಕಾಂಗ್ರೆಸ್ ಪಕ್ಷದಲ್ಲಿ ಸೈದ್ಧಾಂತಿಕ ಸ್ಪಷ್ಟತೆ ಮತ್ತು ಬದ್ಧತೆ ಇರುವುದು ರಾಹುಲ್ ಗಾಂಧಿ ಅವರಿಗೆ ಮಾತ್ರ ಎಂಬ ಉಲ್ಲೇಖ ಇದೆ. ಅದು ಸರಿಯಲ್ಲ. ಸೈದ್ಧಾಂತಿಕ ಸ್ಪಷ್ಟತೆಯುಳ್ಳ ಅನೇಕ ನಾಯಕರು ನಮ್ಮ ರಾಜ್ಯದಲ್ಲಿಯೇ ಸಿಗುತ್ತಾರೆ.

ರಾಷ್ಟ್ರಮಟ್ಟದಲ್ಲಿ ಜೈರಾಂ ರಮೇಶ್, ದಿಗ್ವಿಜಯ್ ಸಿಂಗ್ ಅವರಂತಹ ಅನೇಕರಿದ್ದಾರೆ. ಆದರೆ ಹೀಗೆ ಬದ್ಧತೆಯುಳ್ಳ ಅನೇಕ ನಾಯಕರದು ಗುಡುಗಿನ ಭಾಷಣ ಶೈಲಿಯಲ್ಲ. ಆದರೆ, ಬೆಂಕಿ ಕಾರುವ ಭಾಷಣ ಶೈಲಿಗೆ ನಮ್ಮ ಮತದಾರರು ಬಹಳ ದಿನ ಮಾರುಹೋಗುವುದೂ ಇಲ್ಲ. ಭಾರತ್‌ ಜೋಡೊ ಪಾದಯಾತ್ರೆಯು ಇನ್ನಷ್ಟು ಹೊಸ ನಾಯಕರು ಸೈದ್ಧಾಂತಿಕ ಸ್ಪಷ್ಟತೆ ಪಡೆಯಲು ನೆರವಾದರೆ, ಅದರಿಂದ ಪಕ್ಷಕ್ಕೆ ಒಂದಷ್ಟು ಒಳಿತಾಗಬಹುದು.

⇒ಹುರುಕಡ್ಲಿ ಶಿವಕುಮಾರ, ಬಾಚಿಗೊಂಡನಹಳ್ಳಿ, ಹಗರಿಬೊಮ್ಮನಹಳ್ಳಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು