ಬುಧವಾರ, ಆಗಸ್ಟ್ 10, 2022
21 °C

ವಾಚಕರ ವಾಣಿ: ಸ್ಥಳೀಯ ನಾಯಕರೇ ನಿರ್ವಹಿಸಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಪಚುನಾವಣೆ ಮತ್ತು ಸ್ಥಳೀಯ ಸಂಸ್ಥೆ ಚುನಾವಣೆಗಳ ಪ್ರಚಾರದಲ್ಲಿ ಸಾಮಾನ್ಯವಾಗಿ ರಾಷ್ಟ್ರೀಯ ರಾಜಕೀಯ ಪಕ್ಷಗಳ ಧುರೀಣರು ಪಾಲ್ಗೊಳ್ಳುವುದಿಲ್ಲ. ದೇಶದಲ್ಲಿ ಇದಕ್ಕೆ ದೀರ್ಘ ಇತಿಹಾಸ ಇದೆ. ಆದರೆ ಈ ಪರಂಪರೆಯನ್ನು ಬದಿಗೊತ್ತಿ, ಹೈದರಾಬಾದ್‌ ಮಹಾನಗರಪಾಲಿಕೆ ಚುನಾವಣಾ ಪ್ರಚಾರಕ್ಕೆ ರಾಷ್ಟ್ರೀಯ ಧುರೀಣರು ದೊಡ್ಡ ಸಂಖ್ಯೆಯಲ್ಲಿ ದಾಂಗುಡಿ ಇಟ್ಟಿದ್ದರು. ಇದರಿಂದ, ಈ ಚುನಾವಣೆಯ ಫಲಿತಾಂಶದ ಮೇಲೇ ಸರ್ಕಾರದ ಸ್ಥಿರತೆ ಮತ್ತು ದೇಶದ ಭವಿಷ್ಯ ಅಡಗಿದೆಯೆನೋ ಎನ್ನುವಂತಹ ಭಾವನೆ ಉಂಟಾಗಿದೆ.

ಸ್ಥಳೀಯ ಸಂಸ್ಥೆ ಚುನಾವಣೆಗಳು ಸ್ಥಳೀಯ ಸಮಸ್ಯೆಗಳ ಸುತ್ತ ಇರುವುದರಿಂದ ಇದರಲ್ಲಿ ರಾಷ್ಟ್ರೀಯ ನಾಯಕರು ಭಾಗವಹಿಸುವುದು ಸೂಕ್ತ ಎನಿಸುವುದಿಲ್ಲ. ಸ್ಥಳೀಯ ನಾಯಕರೇ ಇವುಗಳನ್ನು ನಿರ್ವಹಿಸುವುದು ಸಮಂಜಸ. ಚುನಾವಣಾ ವೆಚ್ಚ ಕಡಿತ ಮಾಡುವ ದೃಷ್ಟಿಯಿಂದಲೂ ಇದು ಸರಿಯಾದ ನಿಲುವು.

-ರಮಾನಂದ ಶರ್ಮಾ, ಬೆಂಗಳೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು