ಗುರುವಾರ , ಜುಲೈ 29, 2021
21 °C

ಮಾದರಿ ಗ್ರಾಮಸ್ಥರು, ಪ್ರಚಾರಪ್ರಿಯ ನಾಯಕರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕೋಡಿ ತಾಲ್ಲೂಕಿನ ನನದಿ ಗ್ರಾಮಸ್ಥರು ಶ್ರಮದಾನದ ಮೂಲಕ ಸ್ವತಃ ರಸ್ತೆ ನಿರ್ಮಿಸಿಕೊಂಡಿದ್ದಾರೆ.
(ಪ್ರ.ವಾ., ಜೂನ್‌ 1). ಇದೇ ರೀತಿ, ಮಡಿಕೇರಿ ತಾಲ್ಲೂಕಿನ ಮೊಣ್ಣಂಗೇರಿಯಲ್ಲಿ ಪ್ರಕೃತಿ ವಿಕೋಪದಿಂದ ಹಾಳಾಗಿದ್ದ ಸೇತುವೆ, ರಸ್ತೆ ತಡೆಗೋಡೆಗಳನ್ನು ಗ್ರಾಮಸ್ಥರೇ ನಿರ್ಮಿಸಿಕೊಂಡಿದ್ದಾರೆ (ಪ್ರ.ವಾ., ಮೇ 30). ಇಂತಹ ವರದಿಗಳು ಹಲವರಿಗೆ ಸ್ಫೂರ್ತಿ. ಇಡೀ ಜಗತ್ತೇ ಕೊರೊನಾ ಹಾವಳಿಯಿಂದ ತತ್ತರಿಸುತ್ತಿರುವಾಗ ನಮ್ಮ ಕೆಲವು ರಾಜಕಾರಣಿಗಳಿಗೆ ಕುರ್ಚಿ ಚಿಂತೆ. ಪ್ರವಾಹಪೀಡಿತರ ರಕ್ಷಣೆಗೆ ಬಳಸುವ ತೆಪ್ಪವನ್ನು ಉದ್ಘಾಟಿಸಲು ಬರುವ ಪ್ರಚಾರಪ್ರಿಯ ನಾಯಕರು ಇರುವಾಗ, ಮಳೆ, ಪ್ರವಾಹ, ಪ್ರಕೃತಿ ವಿಕೋಪದಂತಹ ನಮ್ಮ ಸಮಸ್ಯೆಗಳನ್ನು ಮೆಟ್ಟಿ ನಿಲ್ಲಲು ನಾವೇ ಪ್ರಯತ್ನಿಸುವುದು ಒಳಿತು.

-ಎಸ್.ನಾಗರಾಜ ನಾಗೂರ, ಬಾಗಲಕೋಟೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು