ಭಾನುವಾರ, ಸೆಪ್ಟೆಂಬರ್ 27, 2020
21 °C

ಪುತ್ರರಿಂದ ಪೋಷಕರ ಕೊಲೆ | ಮಕ್ಕಳ ಕೊರತೆಗಳ ಬಗ್ಗೆ ಚಿಂತನೆ ನಡೆಯಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಮ್ಮ ಸ್ವಚ್ಛಂದದ ಬದುಕಿಗೆ ಅಡ್ಡಿಯಾದ ಅಪ್ಪಂದಿರನ್ನೇ ಮಕ್ಕಳು ಕೊಂದು ಹಾಕಿರುವ ಘಟನೆಗಳು ಬೆಂಗಳೂರು, ಬೆಳಗಾವಿಯಲ್ಲಿ ಇತ್ತೀಚೆಗೆ ನಡೆದಿವೆ. ಹಾಗಿದ್ದರೆ ನಾವು ಎಲ್ಲಿ ಎಡವಿದ್ದೇವೆ, ಎಲ್ಲಿಗೆ ಬಂದು ನಿಂತಿದ್ದೇವೆ, ಮತ್ತೆಲ್ಲಿಗೆ ತಲುಪುತ್ತೇವೆ ಎಂದು ನೆನೆದರೆ ಭಯವಾಗುತ್ತದೆ. ಈ ಮಕ್ಕಳು ಹಳ್ಳ ಹಿಡಿದಿರುವ ನೈತಿಕತೆಯ ರೂಪಕಗಳಷ್ಟೇ. ಇಂತಹ ಮನಃಸ್ಥಿತಿಯವರು ಸಮಾಜದಲ್ಲಿ ಬಹುಮಂದಿ ಸಿಗುತ್ತಾರೆ. ಈ ಪ್ರಕರಣಗಳಲ್ಲಿ ಮಕ್ಕಳಿಗೆ ಬೇಕಿದ್ದ ನೈತಿಕ ಶಿಕ್ಷಣ, ಹೆತ್ತವರೊಡನೆ ಭಾವನಾತ್ಮಕ ಸಂಬಂಧ, ಸಮಾಜದೊಂದಿಗಿನ ಒಡನಾಟದ ಕೊರತೆಗಳು ಎದ್ದು ಕಾಣುತ್ತವೆ. ಹಾಗಿದ್ದರೆ ಇವೆಲ್ಲವನ್ನೂ ಈ ತಲೆಮಾರಿನ ಮಕ್ಕಳಿಗೆ ಸಮರ್ಪಕವಾಗಿ ತುಂಬಬೇಕಿದ್ದ ಕಾರ್ಯ ಯಾರದ್ದು? ಇದು ಸಮಾಜ, ಹೆತ್ತವರು, ಶಾಲೆಯವರು ಎಲ್ಲರೂ ಚಿಂತಿಸಬೇಕಾದ ವಿಚಾರ.

–ಎಸ್. ಮಲ್ಲಿಕ್ ಭರತ್, ಸಾಸಲಾಪುರ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು