ದೇಶದಲ್ಲಿ ನಾಲ್ಕು ರಾಜಧಾನಿಗಳು ರಚನೆಯಾಗಬೇಕು ಮತ್ತು ಪಾಳಿಯ ಪ್ರಕಾರ ದೇಶದ ವಿವಿಧೆಡೆ ಸಂಸತ್ತಿನ ಅಧಿವೇಶನಗಳನ್ನು ನಡೆಸಬೇಕು ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಈ ರಾಜಧಾನಿಗಳು ಉತ್ತರ, ದಕ್ಷಿಣ, ಪೂರ್ವ ಮತ್ತು ಪಶ್ಚಿಮ ಭಾರತಗಳಲ್ಲಿ ಇರಬೇಕು ಎಂದೂ ಅವರು ಬೇಡಿಕೆ ಇಟ್ಟಿದ್ದಾರೆ. ರಾಜಧಾನಿ ದೆಹಲಿಗೇ ಏಕೆ ಸೀಮಿತವಾಗಬೇಕು ಎಂದು ಪ್ರಶ್ನಿಸಿದ್ದಾರೆ.

ಮಮತಾ ಅವರ ಈ ಬೇಡಿಕೆ ಮುಂದಿನ ದಿನಗಳಲ್ಲಿ ದೇಶದಲ್ಲಿ ಗಂಭೀರ ಚರ್ಚೆಯನ್ನು ಹುಟ್ಟುಹಾಕುವುದರಲ್ಲಿ ಸಂಶಯವಿಲ್ಲ. ದೆಹಲಿ ದೂರ, ಪ್ರತಿಯೊಂದಕ್ಕೂ ದೆಹಲಿಯತ್ತ ನೋಡಬೇಕೇ ಎಂದು ಗೊಣಗುವ ಪರಿಸ್ಥಿತಿಯಲ್ಲಿ, ಅಧಿಕಾರದ ವಿಕೇಂದ್ರೀಕರಣ ಮತ್ತು ದೇಶದಾದ್ಯಂತ ಜನರ ಅನುಕೂಲದ ದೃಷ್ಟಿಯಲ್ಲಿ ಈ ಬೇಡಿಕೆ ಬಲವನ್ನು ಪಡೆದುಕೊಂಡರೆ ಆಶ್ಚರ್ಯವಿಲ್ಲ. ವರ್ಷಗಳ ಹಿಂದೆ ಜನರ ಅನುಕೂಲಕ್ಕಾಗಿ ಸುಪ್ರೀಂ ಕೋರ್ಟ್ ಪೀಠವನ್ನು ದಕ್ಷಿಣ ಭಾರತದಲ್ಲಿ ಸ್ಥಾಪಿಸಬೇಕು ಎನ್ನುವ ಬೇಡಿಕೆ ಕೇಳಿಬಂದಿತ್ತು. ಈಗ ನಾಲ್ಕು ರಾಜಧಾನಿಗಳನ್ನು ರಚಿಸಬೇಕು ಎನ್ನುವ ಬೇಡಿಕೆಯೊಂದಿಗೆ ಈ ಬೇಡಿಕೆಯೂ ಮುನ್ನೆಲೆಗೆ ಬರಬಹುದು. ಹಾಗೆಯೇ ಮಮತಾ ಅವರ ಬೇಡಿಕೆಯಲ್ಲಿ ಕೆಲವರು ಅಗೋಚರ ರಾಜಕೀಯವನ್ನು ನೋಡುವುದನ್ನು ತಳ್ಳಿಹಾಕಲಾಗದು.

- ರಮಾನಂದ ಶರ್ಮಾ,ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.