ಶುಕ್ರವಾರ, 21 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ವಾಚಕರ ವಾಣಿ | ಸರ್ಕಾರಕ್ಕೆ ದಂಡ: ಹೊರೆ ಜನರಿಗೆ!

Last Updated 16 ಡಿಸೆಂಬರ್ 2022, 19:31 IST
ಅಕ್ಷರ ಗಾತ್ರ

ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಗಳನ್ನು ನಡೆಸುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿರುವ ರಾಜ್ಯ ಸರ್ಕಾರಕ್ಕೆ ಸಾಂವಿಧಾನಿಕ ಹೊಣೆಗಾರಿಕೆ ನಿಭಾಯಿಸುವ ಬದ್ಧತೆ ಇದ್ದಂತಿಲ್ಲ ಎಂದು ಅತೃಪ್ತಿ ವ್ಯಕ್ತಪಡಿಸಿ, ₹ 5 ಲಕ್ಷ ದಂಡ ವಿಧಿಸಿರುವ ಹೈಕೋರ್ಟ್‌ ಕ್ರಮ ಒಪ್ಪುವಂಥದ್ದು. ಆದರೆ, ಸರ್ಕಾರವು ದಂಡ ಪಾವತಿಸುವುದು ಜನರ ತೆರಿಗೆ ಹಣದಿಂದಲೇ ಆಗಿರುವುದರಿಂದ, ಆಡಳಿತಾರೂಢರ ನಿರ್ಲಕ್ಷ್ಯಕ್ಕೆ ಜನರು ಪರೋಕ್ಷವಾಗಿ ದಂಡ ಪಾವತಿಸಿದಂತೆ ಆಗುವುದಿಲ್ಲವೇ? ಬದಲಾಗಿ, ಚುನಾವಣೆ ವಿಳಂಬಕ್ಕೆ ಕಾರಣರಾಗಿರುವ ಅಧಿಕಾರಿಗಳು ಅಥವಾ ಜನಪ್ರತಿನಿಧಿಗಳಿಂದ ದಂಡ ವಸೂಲಿ ಮಾಡಿದರೆ, ಮುಂದಿನ ದಿನಗಳಲ್ಲಿ ಸಮಯಕ್ಕೆ ಸರಿಯಾಗಿ ಚುನಾವಣೆಗಳನ್ನು ನಡೆಸಲು ಸರ್ಕಾರ ಎಚ್ಚರ ವಹಿಸುತ್ತದೆ. ಮಿಗಿಲಾಗಿ, ಸರ್ಕಾರದ ಕರ್ತವ್ಯಗಳನ್ನು ಕಾರ್ಯರೂಪಕ್ಕೆ ತರುವಾಗ ವ್ಯವಸ್ಥಿತ ಯೋಜನೆ ಮತ್ತು ಮುಂದಾಲೋಚನೆ ಕ್ರಮಗಳು ಕೂಡ ಬಲಗೊಳ್ಳುತ್ತವೆ.

- ಡಾ. ಜಿ.ಬೈರೇಗೌಡ,ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT