ಗುರುವಾರ , ಫೆಬ್ರವರಿ 20, 2020
29 °C

ಬರೀ ರಾಜಕೀಯ ಮೇಲಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು ಖಂಡಿಸುವವರು ದಲಿತ ವಿರೋಧಿಗಳು ಎಂಬ ಹೊಸ ಬೀಸುಹೇಳಿಕೆಯನ್ನು ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಈ ಕಾಯ್ದೆ ಕುರಿತು ಹುಬ್ಬಳ್ಳಿಯಲ್ಲಿ ನಡೆದ ಜನಜಾಗೃತಿ ಸಮಾವೇಶದಲ್ಲಿ ಹೇಳಿದ್ದಾರೆ (ಪ್ರ.ವಾ., ಜ. 19). ಇದು ನಿಜವೇ ಆಗಿದ್ದರೆ ಅವರು ಪುರಾವೆ, ಅಂಕಿ ಅಂಶದ ಸಮೇತ ವಿವರಿಸಬೇಕಿತ್ತು.

ಈ ಸಮಾವೇಶದಲ್ಲಿ ಸಚಿವರು ಅಪ್ಪಿತಪ್ಪಿಯೂ ಮಹದಾಯಿ ನದಿ ನೀರಿನ ಸಮಸ್ಯೆ ಕುರಿತಾಗಲೀ ನೆರೆ ಸಂತ್ರಸ್ತರ ಬಗ್ಗೆಯಾಗಲೀ ಚಕಾರ ಎತ್ತಲಿಲ್ಲ. ಉಪಚುನಾವಣೆಯಲ್ಲಿ ಗೆದ್ದ ಶಾಸಕರಿಗೆ ಮಂತ್ರಿಯಾಗುವ ಕನಸು, ಮುಖ್ಯಮಂತ್ರಿಗೆ ಆದಷ್ಟು ಬೇಗ ಅವರನ್ನು ಮಂತ್ರಿ ಮಾಡಿ ಕೈತೊಳೆದುಕೊಳ್ಳುವ ಹಪಹಪಿ. ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ತುಮಕೂರಿಗೆ ಬಂದಿದ್ದಾಗ, ಪಾಕಿಸ್ತಾನವನ್ನು ಟೀಕಿಸುವುದರಲ್ಲೇ ಕಾಲ ಕಳೆದರು. ಒಟ್ಟಿನಲ್ಲಿ ಬರೀ ರಾಜಕೀಯ ಮೇಲಾಟ.

-ಡಾ. ಶಿವರಾಜ್ ಬ್ಯಾಡರಹಳ್ಳಿ, ಬೆಂಗಳೂರು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು