ಶನಿವಾರ, ಅಕ್ಟೋಬರ್ 1, 2022
23 °C

ವಾಚಕರ ವಾಣಿ: ಕಾಸ್ಮಿಕ್‌ ಬೇಡ, ಕಾಸ್ಮೆಟಿಕ್ಕೇ ಇರಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕರ್ನಾಟಕದ ಸವಿತಾ ಸಮಾಜದ ಅಭಿವೃದ್ಧಿ ನಿಗಮದವರು ಸೌಂದರ್ಯ ಪ್ರಸಾಧನಗಳ (ಕಾಸ್ಮೆಟಿಕ್‌) ಉತ್ಪಾದನೆ, ಅಭಿವೃದ್ಧಿಗೆಂದು ಬೆಂಗಳೂರಿನ ಬಳಿ 150 ಎಕರೆ ಜಾಗದಲ್ಲಿ ‘ಕಾಸ್ಮಿಕ್‌ ಪಾರ್ಕ್‌’ ರೂಪಿಸುವುದಾಗಿ ಹೇಳಿದ್ದಾರೆ. ಅವರ ಯತ್ನಕ್ಕೆ ಜೈ ಎನ್ನೋಣ. ಆದರೆ ‘ಕಾಸ್ಮಿಕ್‌’ ಎಂದರೆ ನಭೋಮಂಡಲದ ಗೆಲಾಕ್ಸಿ, ನಕ್ಷತ್ರಪುಂಜ, ಕಪ್ಪುರಂಧ್ರ, ಗುರುತ್ವತರಂಗ, ನ್ಯೂಟ್ರಿನೊಧಾರೆಗಳ ಬಹುದೊಡ್ಡ ಬ್ರಹ್ಮಾಂಡ ಎಂಬ ಅರ್ಥವಿದೆ. ಹೇನು, ಮೊಡವೆ, ಹೊಟ್ಟು, ಸುಕ್ಕುಗಳ ನಿವಾರಣೆಯ ಟೆಕ್ನಾಲಜಿಗೆ ಆ ಕಾಸ್ಮಿಕ್‌ ಹೆಸರನ್ನು ಎಳೆತರುವುದು ಸೂಕ್ತವಲ್ಲ.

ನಮ್ಮ ನಡುವಣ ತಾರೆಯರ ಮುಖಾರವಿಂದದ ಕಪ್ಪುಕುಳಿಗಳನ್ನೂ ನೆರೆಗೂದಲನ್ನೂ ಮುದಿನೆರಿಗೆಗಳನ್ನೂ ಸರಿಪಡಿಸುವುದು ಶ್ಲಾಘನೀಯವೇ ಹೌದಾದರೂ ಅದಕ್ಕೆ ಬೇಕಾದ ಸಂಶೋಧನಾ ವಲಯಕ್ಕೆ ಬೇಕಿದ್ದರೆ ‘ಸೌಂದರ್ಯ ಪಾರ್ಕ್‌’ ಎಂತಲೋ ‘ನವಯೌವನ ವನ’ ಎಂತಲೋ ಹೆಸರಿಡಬೇಕೆ ವಿನಾ ಆ ವಿಶಾಲವಿಶ್ವವನ್ನು ಈ ಮಟ್ಟಕ್ಕೆ ಇಳಿಸುವುದು ತರವಲ್ಲ.

ಅದಿತಿ ಜಿ., ಬಾಣಾವರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು